ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ‘ಸಹಜ ಯೋಗ’ ನಾಳೆಯಿಂದ

Last Updated 17 ಜೂನ್ 2022, 14:17 IST
ಅಕ್ಷರ ಗಾತ್ರ

ವಿಜಯಪುರ: ಜೂನ್‌ 18 ಮತ್ತು 19ರಂದು ನಗರದಹಳೇ ಸಿದ್ಧೇಶ್ವರ ಗುಡಿ ರಸ್ತೆಯಲ್ಲಿರುವಶ್ರೀ ಸಿದ್ಧೇಶ್ವರ ಕಲಾ ಮತ್ತು ಮಂಗಲ ಭವನದಲ್ಲಿ ಸಹಜಯೋಗದ ಮೂಲಕ ಕುಂಡಲಿನಿ ಜಾಗೃತಿ ಹಾಗೂ ಆತ್ಮಸಾಕ್ಷಾತ್ಕಾರ ಸಾರ್ವಜನಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಹಯಜಯೋಗ ಸಂಘಟನೆಯ ಪ್ರಮುಖರಾದ ಶಿವಾನಂದ ನೀಲಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಸಹಜಯೋಗ ಸಂಸ್ಥಾಪಕರಾದ ಮಾತಾಜಿ ನಿರ್ಮಲಾದೇವಿಯವರು ಸನಾತನ ಧರ್ಮಸಾರ ಸೂತ್ರಗಳನ್ನು ಸರಳವಾಗಿ ಕ್ರೋಢೀಕರಿಸಿ, ಈ ಆಧುನಿಕ ಯುಗಕ್ಕೆ ಸೂಕ್ತವಾಗಿ ಸಾಮಾನ್ಯರೂ ಸಾಧಿಸಬಲ್ಲ ಯೋಗ ತಂತ್ರಗಳನ್ನೂ, ಧ್ಯಾನ ರೀತಿಯನ್ನೂ ತಿಳಿಸಿಕೊಡುವ ವಿದ್ಯೆಗೆ ‘ಸಹಜ ಯೋಗ’ ಎಂದು ಹೆಸರಿಸಿದ್ದಾರೆ ಎಂದರು.

ದಿನನಿತ್ಯದ ಒತ್ತಡಗಳಿಗೆ ಸಿಕ್ಕಿ ಸುಸ್ತಾಗಿ, ತಲೆ ಚಿಟ್ಟು ಹಿಡಿದಂತಾದಾಗ ಮನುಷ್ಯ ನೆಮ್ಮದಿ ಮತ್ತು ಶಾಂತಿ ಬಯಸುವುದು ಸಹಜ. ನಮ್ಮ ಆಯಾಸವನ್ನು ಕಳೆದು ಉತ್ಸಾಹ ತುಂಬಬಲ್ಲ, ಒತ್ತಡಗಳನ್ನು ನಿವಾರಿಸಿ ನೆಮ್ಮದಿ ಹಾಗೂ ಶಾಂತಿ ನೀಡಬಲ್ಲ ಸರಳ ಸುಂದರ ಯೋಗ ಕ್ರಮವೇ ಸಹಜ ಯೋಗ ಧ್ಯಾನ ಮಾರ್ಗ ಎಂದರು.

ನೆಮ್ಮದಿ, ಶಾಂತಿ, ಆರೋಗ್ಯದ ಜೊತೆಗೆ ಕುಂಡಲಿನಿ ಜಾಗೃತಿಯಿಂದ ಆತ್ಮ ಸಾಕ್ಷಾತ್ಕಾರದ ಅನುಭವ ನೀಡಬಲ್ಲ ಸಹಜಯೋಗ, ಸಾಮಾನ್ಯ ಮನುಷ್ಯನಿಗೆ ಸರಳ ರೀತಿಯಲ್ಲಿ ಅತ್ಯಮೂಲ್ಯವಾದ ಅತ್ಮಾನುಭವವನ್ನು ಕೊಡುತ್ತದೆ ಎಂದು ಹೇಳಿದರು.

ಸಹಜಯೋಗ ಧ್ಯಾನ ಸಿದ್ಧಿಸಿದಾಗ ಚಿಂತೆಯಿಲ್ಲದೆ ಮನಸ್ಸಿನ ಚಡಪಡಿಕೆ ಕಡಿಮೆಯಾಗುವುದು. ಆರಾಮವೆನ್ನಿಸಿ ದೇಹ ಹಗುರವಾಗುವುದು. ಮನಸ್ಸು ಶಾಂತವಾಗಿ ಏಕಾಗ್ರತೆ ಉತ್ತಮವಾಗಿ, ಸಮಚಿತ್ತ ಮನಸ್ಥಿತಿ ಉಂಟಾಗುವುದು ಎಂದರು.

ಈ ಧ್ಯಾನದಿಂದಾಗಿ ಒತ್ತಡ, ಉದ್ವೇಗ, ಭಯ ಮತ್ತು ಅಭದ್ರತೆಯಿಂದ ಪಾರಾಗಿ, ಶಾರೀರಿಕ, ಮಾನಸಿಕ ಹಾಗೂ ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಂಡು, ಸೃಜನಶೀಲತೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಗೊಳಿಸಿಕೊಂಡು ಸಂಪೂರ್ಣವಾಗಿ ಕ್ರಿಯಾತ್ಮಕರಾಗಬಹುದು ಎಂದರು.

ಕೆಟ್ಟ ಚಟಗಳನ್ನು ಸುಲಭವಾಗಿ ಬಿಡಬಹುದಲ್ಲದೆ ಮನೆಯ, ಕಚೇರಿಯ ಅಥವಾ ಯಾವುದೇ ಜಾಗದಲ್ಲಿ ಉಂಟಾಗಬಹುದಾದ ಮಾನಸಿಕ ಒತ್ತಡಗಳನ್ನು ನೋಡುವ ಧೋರಣೆ ಬದಲಾಗಿ, ಸಂತ್ರಸ್ತ ಸಂದರ್ಭಗಳನ್ನು ಸಮಾಧಾನದಿಂದ ನಿರ್ವಹಿಸುವಂತಹ ಶಕ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಸಹಜಯೋಗ ಚೆನ್ನಾಗಿ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳ ಗ್ರಹಿಸುವ ಮತ್ತು ಜ್ಞಾಪಕ ಶಕ್ತಿ ಮತ್ತು ಗಮನಹರಿಸುವ ಶಕ್ತಿಯು ಉತ್ತಮಗೊಳ್ಳುತ್ತದೆ. ಇದನ್ನು ಎಲ್ಲ ವಯಸ್ಸಿನವರೂ ಅಭ್ಯಾಸಮಾಡಲು ಅತ್ಯಂತ ಸುಲಭ ಎಂದು ಹೇಳಿದರು.

ವಿಜಯಪುರದಲ್ಲಿ ನಡೆಯಲಿರುವ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿದೆ. ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ9448497754, 9449875503, 9019480408 ಸಂಪರ್ಕಿಸಬಹುದು ಎಂದು ಹೇಳಿದರು.

ಸಹಜಯೋಗ ಸಂಘಟನೆಯ ಪ್ರಮುಖರಾದ ದಿಲೀಪ್‌ ತೆಲಂಗ, ಆನಂದ, ಗೌರವ್‌, ಶಿವು ನಂದಿಗೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT