ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ ಇ ಇ ಪರೀಕ್ಷೆ ಬರೆದ ಹಿರಿಯರು!

Last Updated 25 ಮಾರ್ಚ್ 2022, 13:19 IST
ಅಕ್ಷರ ಗಾತ್ರ

ವಿಜಯಪುರ: ನಿವೃತ್ತಿಯ ನಂತರವೂ ಇಬ್ಬರು ಹಿರಿಯರು ಟಿ ಇ ಇ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ನಗರದ ಬಿ ಎಲ್ ಡಿ ಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿ ಇ ಇ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ, ಎಂ.ಎ.ಇಂಗ್ಲಿಷ್‌(ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ.

ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ಇವರು ಈಗಾಗಲೇ ಇಗ್ನೋದಿಂದ ನಾಲ್ಕು ಸ್ನಾತಕೋತ್ತರ ಪದವಿ ಪಡೆದಿದ್ದು ಐದನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ ಬರೆಯುತ್ತಿದ್ದಾರೆ.

ಸಿಂದಗಿ ಆರ್.ಡಿ.ಪಾಟೀಲ ಪಿ.ಯು.ಕಾಲೇಜಿನ ನಿವೃತ್ತ ಉಪನ್ಯಾಸಕ 66 ವರ್ಷದ ಪರಸಪ್ಪ ಮಡಿವಾಳರ ಇಂಗ್ಲಿಷ್‌ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದಾರೆ.

ನಿವೃತ್ತಿ ಜೀವನದಲ್ಲಿಯೂ ಜ್ಞಾನಾರ್ಜನೆಗಾಗಿ ಇಬ್ಬರೂ ಹಿರಿಯರು ವಿದ್ಯಾರ್ಜನೆಯನ್ನು ಮುಂದುವರೆಸಿರುವುದಕ್ಕೆ ಇಗ್ನೋ ಕೇಂದ್ರದ ಸಂಯೋಜಕರಾದ ಡಾ. ಮಂಜುನಾಥ ಕೋರಿ, ಪ್ರಾಚಾರ್ಯ ಡಾ. ಭಾರತಿ ವೈ. ಖಾಸನೀಸ, ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT