ಹೊರ್ತಿ: ಸಮೀಪದ ಶಾಂತಿ ಕುಟೀರದಲ್ಲಿ ಗುರುವಾರ ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು. ಬಾಲರಾಮರ ತೊಟ್ಟಿಲು ಕಾರ್ಯಕ್ರಮವು ನಡೆಯಿತು.

ಶಾಂತಿಕುಟೀರ ಆಶ್ರಮದಲ್ಲಿ ಜ್ಞಾನಯಜ್ಞ ಆಚರಿಸಲಾಯಿತು. ದಾಸಬೋಧ ಮತ್ತು ಸುಲಭ ಆತ್ಮಜ್ಞಾನ ಗ್ರಂಥಗಳ ವಾಚನ-ಪ್ರವಚನಗಳು ನಡೆದವು. ಒಂದು ವಾರ ನಡೆದ ಆಧ್ಯಾತ್ಮಿಕ ಶಿಬಿರದಲ್ಲಿ ಧ್ಯಾನ, ಚರ್ಚೆ, ಪ್ರವಚನ ಶ್ರವಣ ಹಾಗೂ ಗ್ರಂಥ ವಾಚನ, ಭಜನೆ, ಸಂಕೀರ್ತನೆ ಕಾರ್ಯಕ್ರಮಗಳು ಜರುಗಿದವು. ನಂತರ ಮಹಾಪ್ರಸಾದ ವಿತರಣೆ ಜರುಗಿತು.

ಟ್ರಸ್ಟಿನ ಅಧ್ಯಕ್ಷ ಗೋವಿಂದ ಬಾಹೇತಿ, ಉಪಾಧ್ಯಕ್ಷ ರವಿ ದಾನಿ, ಡಾ.ಸತೀಶ ಕನ್ನೂರ, ಸಂಜಯ ತಿಕೋಟಿ, ಭಾರತೀಯ ಸುರಾಜ್ಯ ಸಂಸ್ಥೆಯ ಅಧ್ಯಕ್ಷ ಬಿ ಬಿ.ಪೂಜಾರ, ಅಜೀತ ಕನ್ನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.