ಬಸವನಬಾಗೇವಾಡಿ: ‘ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಅಧ್ಯಾತ್ಮ ಲೋಕದ ಸಿರಿಯಾಗಿದ್ದಾರೆ. ಇವರು ನೀಡಿರುವ ಸಂದೇಶಗಳು ಎಂದಿಗೂ ಸ್ಮರಣೀಯವಾಗಿವೆ. ಇವುಗಳನ್ನು ನಾವೆಲ್ಲರೂ ಅಂತರಂಗದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು’ ಎಂದು ರೋಣಿಹಾಳ ಗ್ರಾಮದ ಪ್ರಗತಿಪರ ರೈತ ಶ್ರೀಶೈಲ ಬಿರಾದಾರ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಶಿವಲಿಂಗೇಶ್ವರ ವಿರಕ್ತಮಠದ ಶರಣ ಬಳಗ, ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಕೂಕು ಘಟಕದ ಸಹಯೋಗದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಂತರಂಗದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದೇಶ್ವರ ಸ್ವಾಮೀಜಿ ತಮ್ಮ ಪ್ರವಚನದಲ್ಲಿ ಜೀವನ ಮೌಲ್ಯ, ಸಾವಯವ ಕೃಷಿ, ಶರಣರ ಸಂದೇಶ ಸೇರಿದಂತೆ ತತ್ವಶಾಸ್ತ್ರದಲ್ಲಿರುವ ಸಾರವನ್ನು ನಮಗೆ ಉಣಬಡಿಸಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಅವರು ಪ್ರವಚನ ಕಾಯಕ ಮಾಡದೇ ಯಾವುದೇ ಆಹಾರ ಸೇವಿಸುತ್ತಿರಲಿಲ್ಲ ಎಂಬುದು ಅವರು ಕನ್ಹೇರಿ ಮಠದಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ನಮಗೆ ಗೊತ್ತಾಯಿತು’ ಎಂದು ಸ್ಮರಿಸಿದರು.

ಮುಖಂಡ ರವಿಗೌಡ ಚಿಕ್ಕೊಂಡ, ಜನಪದ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ ಗೋನಾಳ, ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಹೂಗಾರ ಇದ್ದರು.

ಶರಣು ಬಸ್ತಾಳ ಪ್ರಾರ್ಥನೆ ಹಾಡಿದರು. ಕೊಟ್ರೇಶ ಹೆಗಡ್ಯಾಳ ಸ್ವಾಗತಿಸಿದರು. ಬಸವರಾಜ ಹಂಚಲಿ, ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಬಿ.ವಿ.ಚಕ್ರಮನಿ ವಂದಿಸಿದರು.

ಅಂತರಂಗದ ಅರಿವು ಕಾರ್ಯಕ್ರಮದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಪ್ರಭಾಕರ ಖೇಡದ, ಸುಮಂಗಲಾ ಮಠಪತಿ, ಶಾಂತಾ ಚೌರಿ, ತಾರಾಮತಿ ಹೂಗಾರ, ಅನಿಲ ಬಿರಾದಾರ, ವಿರೇಶ ಗೂಡ್ಲಮನಿ, ಗಂಗಾಧರ ಪಾರಶೆಟ್ಟಿ, ಪ್ರೊ.ಸುಭಾಸ, ಶಿವಕುಮಾರ ಶಿವಶಿಂಪಿ, ದ್ರಾಕ್ಷಾಯಿಣಿ ಬಾಗೇವಾಡಿ ಸೇರಿದಂತೆ 15ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.