ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆ.10 ರಂದು ಸಿದ್ದರಾಜ ಯೋಗಿಂದ್ರ ಶ್ರೀಗಳ 111ನೇ ಜಯಂತ್ಯುತ್ಸವ

Published 9 ಆಗಸ್ಟ್ 2024, 16:09 IST
Last Updated 9 ಆಗಸ್ಟ್ 2024, 16:09 IST
ಅಕ್ಷರ ಗಾತ್ರ

ತಾಳಿಕೋಟೆ: ಕಾರವಾರ ಜಿಲ್ಲೆಯ ಸಿರಸಿ ನಗರದ ಬಣ್ಣದ ಮಠದ ತಪಸ್ವಿ ಲಿಂ.ಗುರು ಸಿದ್ಧರಾಜ ಯೋಗಿಂದ್ರ ಸ್ವಾಮಿಗಳವರ 111ನೇ ಜಯಂತ್ಯುತ್ಸವವನ್ನು ತಾಲ್ಲೂಕಿನ ಸಾಸನೂರ ಗ್ರಾಮದ ಮಡಿವಾಳೇಶ್ವರ ಹಿರೇಮಠದಲ್ಲಿ ಆ.10 ರಂದು ಮುಂಜಾನೆ 10:30 ಘಂಟೆಗೆ ಆಯೋಜಿಸಿದೆ.

ನೇತೃತ್ವವನ್ನು ಸಾಸನೂರ ತುಂಬಗಿ ಹಿರೇಮಠದ ಮಹಾಂತ ಶಿವಾಚಾರ್ಯರು ವಹಿಸಲಿದ್ದು, ಚಿಕ್ಕ ತೊಟ್ಟಲಕೇರಿಯ ಅಡವಿಸ್ವಾಮಿ ಮಠದ ಪೀಠಾಧಿಪತಿ ಶಿವಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಪಾಲ್ಗೊಳ್ಳುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ (ಸಾಸನೂರ) ವಹಿಸುವರು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT