ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ: 97 ಜನರಿಗೆ ಹಕ್ಕುಪತ್ರ ವಿತರಣೆ

ಮನೆಯಲ್ಲಿದ್ದರೂ ಮನೆ ಅವರದಾಗಿರಲಿಲ್ಲ: ಶಾಸಕ ಭೂಸನೂರ
Last Updated 14 ಫೆಬ್ರುವರಿ 2022, 16:52 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಕ್ರೀಡಾಂಗಣದ ಪ್ರದೇಶದಲ್ಲಿ ವಾಸವಾಗಿದ್ದ 97 ಕುಟುಂಬಗಳನ್ನು ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ನಿರ್ಮಾಣಗೊಂಡ ಮನೆಗಳಿಗೆ ಸ್ಥಳಾಂತರಿಸಿ ತುಂಬಾ ವರ್ಷಗಳಾಗಿದ್ದರೂ ಅವರಿಗೆ ಹಕ್ಕುಪತ್ರಗಳೇ ಸಿಕ್ಕಿರಲಿಲ್ಲ. ವಸತಿ ಸಚಿವ ವಿ. ಸೋಮಣ್ಣ ಅವರು ಖುದ್ದಾಗಿ ಸಿಂದಗಿಗೆ ಬಂದು ಪರಿಶೀಲನೆ ನಡೆಸಿದ ನಂತರ ಎಲ್ಲರಿಗೂ ಹಕ್ಕುಪತ್ರ ನೀಡುವ ವ್ಯವಸ್ಥೆ ಮಾಡಿದ್ದಾರೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಇಲ್ಲಿಯ ವಿದ್ಯಾನಗರ ಕೊಳಗೇರಿ ಪ್ರದೇಶದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಕಳೆದ ಡಿಸೆಂಬರ್ 25 ರಂದು ಮುಖ್ಯಮಂತ್ರಿ 16 ಜನರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ನೀಡಿದ್ದರು. ಈಗ ಎಲ್ಲ ಕುಟುಂಬಗಳು ಹಕ್ಕುಪತ್ರ ಪಡೆದು ನೆಮ್ಮದಿಯ ನಿಟ್ಟಿಸಿರು ಬಿಟ್ಟಿವೆ ಎಂದರು.

ಬಹಳ ವರ್ಷಗಳಿಂದ ಮನೆಗಳಲ್ಲಿದ್ದರೂ ಮನೆ ಅವರದಾಗಿರಲಿಲ್ಲ. ಅವರ ಹೆಸರಿನಿಂದ ಪುರಸಭೆ ಉತಾರ ನೀಡುತ್ತಿರಲಿಲ್ಲ. ಹೀಗಾಗಿ ಈ ನಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ನಿವಾಸಿಗಳ ಕನಸು ನನಸು ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿರುವೆ. ನನಗೂ ಖುಷಿ ತಂದಿದೆ ಎಂದರು.

ಹಕ್ಕುಪತ್ರಗಳನ್ನು ಅತ್ಯಂತ ಪಾರದರ್ಶಕವಾಗಿ ಸಿದ್ದಪಡಿಸಲಾಗಿದೆ. ಅವರ ಮನೆಯ ಎದುರು ಕುಟುಂಬದ ಸದಸ್ಯರು ನಿಂತುಕೊಂಡು ಫೋಟೊ ತೆಗೆಯಿಸಿಕೊಂಡಿರುವುದನ್ನೇ ಹಕ್ಕುಪತ್ರಗಳಲ್ಲಿ ಮುದ್ರಿಸಲಾಗಿದೆ. ಈ ಹಿಂದೆ ಪಟ್ಟಣದ ಪುರಸಭೆ ಗೊಂದಲ ಸೃಷ್ಟಿ
ಮಾಡಿದ್ದನ್ನು ಗಮನದಲ್ಲಿಟ್ಟುಕೊಂಡು ಅರ್ಹ ಫಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ.

ಅದರಂತೆ ಕಲ್ಯಾಣಗರದ ಶಾಲಾ ಆವರಣದಲ್ಲಿ ಗುಡಿಸಲು ಹಾಕಿಕೊಂಡಿದ್ದ 19 ಕುಟುಂಬಗಳನ್ನು ಕೂಡ ಬೇರೆಡೆ ಸ್ಥಳಾಂತರಿಸಲಾಗಿದ್ದು ಅವರಿಗೂ ಶೀಘ್ರದಲ್ಲಿಯೇ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ದಲಿತ ಸಂಘಟನೆಯ ಪ್ರಮುಖ ರಾಜೂ ಗುಬ್ಬೇವಾಡ ಮಾತನಾಡಿದರು. ಕೊಳಗೇರಿ ಅಭಿವೃದ್ದಿ ಮಂಡಳಿ ಎಇಇ ರಾಜಶೇಖರ ಚವ್ಹಾಣ
ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪುರಸಭೆ ಸದಸ್ಯರಾದ ರಾಜಣ್ಣ ನಾರಾಯಣಕರ, ಶರಣಗೌಡ ಪಾಟೀಲ, ಮಲ್ಲೂ ಪೂಜಾರಿ, ರಾಮೂ ಮೋರಟಗಿ ಹಾಗೂ ಈರಣ್ಣ ರಾವೂರ, ಸುದರ್ಶನ ಜಂಗಣ್ಣಿ, ಶರಣಪ್ಪ ಸುಲ್ಪಿ, ಶಿವಾನಂದ ಹರನಾಳ, ಮಾಂತೇಶ ನಾಯ್ಕೋಡಿ, ಬಸೂ ಪಡಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT