ಶಾಂತೂ ಹಿರೇಮಠ

ಸಿಂದಗಿ ನಗರ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಅದರಲ್ಲೂ ಶೈಕ್ಷಣಿಕ ರಂಗದಲ್ಲಿ ಇನ್ನೂ ವಿಶೇಷತೆ ಪಡೆದುಕೊಂಡಿದೆ. ಅಂತೆಯೇ ಸಿಂದಗಿ ಶಿಕ್ಷಣದ ಕಾಶಿ ಎಂದೇ ಹೆಸರುವಾಸಿಯಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ 1944ರಲ್ಲಿ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿ ಶಿಕ್ಷಣ ಸಂಸ್ಥೆ ಸ್ಥಾಪನೆಗೊಳ್ಳಲು ಅಂದಿನ ಮಾಮಲೇದಾರ(ತಹಶೀಲ್ದಾರ್) ವಿ.ಆರ್.ದಳವಿ ಅವರ ಶ್ರಮ, ಸಾರಂಗಮಠದ ಚೆನ್ನವೀರ ಶ್ರೀಗಳ ಪ್ರೇರಣೆ ಸಂಸ್ಥೆ ಪ್ರಾರಂಭಗೊಳ್ಳಲು ಕಾರಣವಾಯಿತು.

ನಂತರ ಸಾರಂಗಮಠದ ಚೆನ್ನವೀರ ಶ್ರೀಗಳು 1969ರಲ್ಲಿ ಸ್ಥಾಪಿಸಿದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣವಾಯಿತು. ಇದರಡಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ, ಪಿಯು ಕಾಲೇಜು, ಪದವಿ ಕಾಲೇಜು, ಪಾಲಿಟೆಕ್ನಿಕ್, ಪ್ಯಾರಾಮೆಡಿಕಲ್, ಬಿ.ಇಡಿ, ಸಿಬಿಎಸ್ಇ ಹೀಗೆ 20 ಅಂಗಸಂಸ್ಥೆಗಳಲ್ಲಿ 6-7 ಸಾವಿರದಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯಲ್ಲೂ ಪೂರ್ವ ಪ್ರಾಥಮಿಕದಿಂದ ಪದವಿವರೆಗೆ ಆಯುರ್ವೇದಿಕ್ ವೈದ್ಯಕೀಯ ಕಾಲೇಜು, ಕಾನೂನು ಕಾಲೇಜುಗಳಲ್ಲಿ ಒಟ್ಟು 4-5 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

1971ರಲ್ಲಿ ಪ್ರಾರಂಭಗೊಂಡ ಅಂಜುಮನ್-ಇ-ಇಸ್ಲಾಂ ಶಿಕ್ಷಣ ಸಂಸ್ಥೆಯೂ ಈ ಭಾಗದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ವಿವಿಧ ಅಂಗ ಸಂಸ್ಥೆಗಳಲ್ಲಿ 2000 ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಈಚೆಗೆ ಪ್ರಾರಂಭಗೊಂಡ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ 1,700 ವಿದ್ಯಾರ್ಥಿಗಳು, ಎಲೈಟ್ ಸಂಸ್ಥೆಯಲ್ಲಿ 2,000, ಪ್ರೇರಣಾ ಸಂಸ್ಥೆ 1,200, ಆಕ್ಸಫರ್ಡ್ ಸ್ಕೂಲ್ 630, ಗುರುಕುಲ ಸಂಸ್ಥೆ 200 ವಿದ್ಯಾರ್ಥಿಗಳು, ಸರ್ಕಾರಿ ಪಿಯು ಕಾಲೇಜು 552, ಆದರ್ಶ ವಿದ್ಯಾಲಯ 500, ಸರ್ಕಾರಿ ಪ್ರಥಮ ದರ್ಜೆ ಕಾಲೇಜು 350, ಅಲ್ಲದೆ, ಸಿಬಿಎಸ್ಇ ಪಠ್ಯಕ್ರಮ ಒಳಗೊಂಡ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್, ಮಾತಾಲಕ್ಷ್ಮಿ, ಲೋಯಲಾ, ಶ್ರೀಪದ್ಮರಾಜ ಸ್ಕೂಲ್, ವಿವೇಕ ಇಂಟರ್ ನ್ಯಾಷನಲ್ ಶಾಲೆಗಳು.

ನಗರದಲ್ಲಿ 5 ಡಿಗ್ರಿ ಕಾಲೇಜು, 17 ಪಿಯು ಕಾಲೇಜುಗಳಿವೆ. 15ಕ್ಕೂ ಅಧಿಕ ಪ್ರೌಢಶಾಲೆಗಳಿವೆ. ಹೀಗೆ ಸಿಂದಗಿ ನಗರದಲ್ಲಿ ಒಟ್ಟು 25 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನೆರೆ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸಿಂದಗಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಗುಣಮಟ್ಟದ ಶಿಕ್ಷಣ ನೀಡುವಿಕೆಗೆ ಸಾಕ್ಷಿಯಾಗಿದೆ.ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಧಿಕ ಶಾಲಾ ಕಾಲೇಜುಗಳನ್ನು ಹೊಂದಿದ ನಗರ ಸಿಂದಗಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-1275230385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.