ಸಿಂದಗಿ: ‘ಕಿತ್ತೂರು ಚನ್ನಮ್ಮರನ್ನು ಕೇವಲ ಪಂಚಮಸಾಲಿ ಸಮುದಾಯಕ್ಕೆ ಸೀಮಿತ ಮಾಡಬೇಡಿ, ಅವರು ದೇಶದ ಆಸ್ತಿ. ಚನ್ನಮ್ಮರ ಭಾವಚಿತ್ರ ಪೂಜಿಸಿದರೆ ಸಾಲದು ಅವರ ಆದರ್ಶ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು’ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ನಗರದ ಆಶೀರ್ವಾದ ಕಲ್ಯಾಣಮಂಟಪದಲ್ಲಿ ಶನಿವಾರ ದೇವರಹಿಪ್ಪರಗಿ– ಆಲಮೇಲ– ಸಿಂದಗಿ ಅಖಂಡ ಮೂರು ತಾಲ್ಲೂಕು ಲಿಂಗಾಯತ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ‘ಸಿಂದಗಿ ತಾಲ್ಲೂಕು ಪಂಚಮಸಾಲಿ ಸಮಾಜದ ಸಂಘಟನೆ ಇಡೀ ಜಿಲ್ಲೆಗೆ ಮಾದರಿಯಾಗಿದೆ’ ಎಂದು ತಿಳಿಸಿದರು.

ಅರ್ಜುಣಗಿ ಸರ್ಕಾರಿ ಪಿಯು ಕಾಲೇಜು ಅತಿಥಿ ಉಪನ್ಯಾಸಕಿ ಸವಿತಾ ಝಳಕಿ ಮಾತನಾಡಿ, ‘ಸಿಂದಗಿ ನಗರ ಸಾಂಸ್ಕೃತಿಕ ನೆಲೆ ಹೊಂದಿದೆ. ಈ ಭಾಗದಲ್ಲಿ ಶಿಕ್ಷಣದ ಹಸಿವು ಇದೆ. ಹೀಗಾಗಿ ರಾಜ್ಯ ಗಮನ ಸೆಳೆಯುವಂತೆ ಶಿಕ್ಷಣ ಪ್ರಸಾರ ನಡೆಯುತ್ತಿದೆ. ಇತಿಹಾಸ ಓದುವುದಲ್ಲ, ಇತಿಹಾಸ ನಿರ್ಮಿಸಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳ ಸಾಧನೆಯಾಗಿರಬೇಕು’ ಎಂದು ಹೇಳಿದರು.

ಕಲಬುರ್ಗಿ ವಿಶೇಷ ಪೊಲೀಸ್ ಪಡೆ ಡೆಪ್ಯೂಟಿ ಕಮಾಂಡೆಂಟ್ ಶರಣಬಸು ಕೊಳಾರಿ ಅವರು ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಗೌರವ ಸ್ವೀಕರಿಸಿ, ‘ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಪ್ರಾಶಸ್ತ್ಯ ಕೊಡದೆ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುವ ಕೌಶಲ ಹೊಂದಿರಬೇಕು’ ಎಂದು ಸಲಹೆ ನೀಡಿದರು.

ನಿಕಟಪೂರ್ವ ಕ್ಷೇತ್ರಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶಾಸಕ ಅಶೋಕ ಮನಗೂಳಿಯವರು ಸರ್ಕಾರದಿಂದ ₹50 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು ಲಿಂಗಾಯತ ಪಂಚಮಸಾಲಿ ವಿದ್ಯಾರ್ಥಿಗಳಿಗಾಗಿ ಸಿಂದಗಿಯಲ್ಲಿ ವಸತಿನಿಲಯ ಕಟ್ಟಡ ಪ್ರಗತಿಯಲ್ಲಿದೆ’ ಎಂದರು.

ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಪಂಚಮಸಾಲಿ ಸಮಾಜದ ಹಾಸ್ಟೆಲ್ ಸಿಂದಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ಇಡೀ ಜಿಲ್ಲೆಯಲ್ಲಿಯೇ ಇದೇ ಮೊದಲು. ಇಲ್ಲಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಸಮಾವೇಶ ನಡೆಯುತ್ತದೆ. ಉತ್ತರ ಕರ್ನಾಟಕದಲ್ಲಿಯೇ ಸಿಂದಗಿ ಪಂಚಮಸಾಲಿ ಸಮಾಜದ ಸಂಘಟನೆ ಮೊದಲ ಸ್ಥಾನದಲ್ಲಿದೆ’ ಎಂದರು.

‘ಮಠ, ದೇವಸ್ಥಾನಕ್ಕೆ ಕೊಡುವುದನ್ನು ಬಿಟ್ಟರೂ ಸರಿ ಆದರೆ ಪಂಚಮಸಾಲಿ ಬಡ ಮಕ್ಕಳಿಗೆ ಉಳ್ಳವರು ಸಹಾಯ ಮಾಡಿ ಶಿಕ್ಷಣವಂತರನ್ನಾಗಿಸಲು ಮುಂದಾಗಬೇಕು. ಚನ್ನಮ್ಮನ ಕಿತ್ತೂರ ನೆಲದಲ್ಲಿ ತುಮಕೂರು ಸಿದ್ಧಗಂಗಾಮಠ, ಕೊಪ್ಪಳ ಗವಿಮಠ ಮಾದರಿಯಲ್ಲಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ನೀಡುವ ಬಗ್ಗೆ ರೂಪರೇಷೆ ಹಾಕಲಾಗಿದೆ’ ಎಂದು ತಿಳಿಸಿದರು.

ಲಿಂಗಾಯತ ಪಂಚಮಸಾಲಿ ಸಮಾಜ ಸಿಂದಗಿ ತಾಲ್ಲೂಕು ಶಾಖೆ ಅಧ್ಯಕ್ಷ ಎಂ.ಎಂ.ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಆಸಂಗಿಹಾಳ ಆರೂಢಮಠದ ಶಂಕರಾನಂದ ಮಹಾರಾಜರು ಸಮಾವೇಶದ ಸಮ್ಮುಖ ವಹಿಸಿದ್ದರು.

ಆನಂದ ಶಾಬಾದಿ, ಧನರಾಜ್ ಮುಜಗೊಂಡ, ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ನಾಗರತ್ನಾ ಮನಗೂಳಿ, ಸಿದ್ಧರಾಮ ಪಾಟೀಲ, ಅಶೋಕ ಕೊಳಾರಿ, ಸಿದ್ದನಗೌಡ ಪಾಟೀಲ ಗುಂದಗಿ, ವಿಶ್ವನಾಥ ಕುರಡಿ, ಪ್ರಭುಗೌಡ ಪಾಟೀಲ ಡಂಬಲ, ಬಸವರಾಜ ಬಾಗೇವಾಡಿ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಬಿ.ಜಿ.ನೆಲ್ಲಗಿ ವಕೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-26-1775710438

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.