ಸಿಂದಗಿ: ‘ಬಸವಣ್ಣ, ಡಾ.ಅಂಬೇಡ್ಕರ್ರಂತಹ ಮಹಾಪುರುಷರ ಜಯಂತಿಯನ್ನು ಜಾತಿ ಆಧಾರದ ಮೇಲೆ ಆಚರಿಸುವುದು ಸಲ್ಲದು. ಎಲ್ಲ ಜಾತಿ, ಸಮುದಾಯದವರು ಒಂದುಗೂಡಿ ಆಚರಿಸಬೇಕು’ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

‘ನಗರದಲ್ಲಿ 1999ರಲ್ಲಿ ನಾನು ಶಾಸಕನಿದ್ದಾಗ ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಅನಾವರಣಗೊಳಿಸಿದ್ದರು. ಅಂದು ಅಂಬೇಡ್ಕರ್ ಪುತ್ಥಳಿ ಉದ್ಘಾಟನಾ ಸಮಾರಂಭದ ಕಲ್ಲಿನ ಫಲಕ ಅಳವಡಿಸಲಾಗಿತ್ತು. ಆದರೆ ಇಂದು ಅದು ಮಾಯವಾಗಿದೆ, ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದರು.

ದಲಿತ ಮುಖಂಡ ಚಂದ್ರಕಾಂತ ಸಿಂಗೆ ಮಾತನಾಡಿ, ‘ಪ್ರಸ್ತುತ ರಾಜಕಾರಣದಲ್ಲಿ, ಸಂಘಟನೆಗಳಲ್ಲಿ ಬದ್ಧತೆ ಕಾಣುತ್ತಿಲ್ಲ. ಬಾಯಲ್ಲಿ ಭೀಮವಾದ, ಮನಸ್ಸಲ್ಲಿ ಮನುವಾದ’ ಎಂದು ಹೇಳಿದರು.

ಜಯಂತ್ಯುತ್ಸವ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿ, ‘ಸಂಘರ್ಷದಿಂದ ಜನರ ಪ್ರೀತಿ ಪಡೆಯಲು ಸಾಧ್ಯವಿಲ್ಲ. ದಲಿತ ಸಂಘಟನೆಗಳು ಒಂದುಗೂಡಬೇಕು’ ಎಂದರು.

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿರುವ ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀಕಾಂತ ಕಾಂಬಳೆ ಅವರನ್ನು ಗೌರವಿಸಲಾಯಿತು. ಭಂತೆ ಸಂಘಪಾಲ ಭಂತೇಜಿ ಸಾನ್ನಿಧ್ಯ ವಹಿಸಿದ್ದರು.

ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಣಮಂತ ಸುಣಗಾರ, ದಲಿತ ಮುಖಂಡರಾದ ರಾಜಶೇಖರ ಕೂಚಬಾಳ, ಪರುಶರಾಮ ಕಾಂಬಳೆ, ರವಿ ಹೋಳಿ, ಸಾಯಬಣ್ಣ ಪುರದಾಳ, ಪ್ರಧಾನಿ ಮೂಲಿಮನಿ,ಸಿದ್ಧಲಿಂಗ ಚೌಧರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-26-317456999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.