ಸಿಂದಗಿ: ‘ಬಂದಾಳ ಗ್ರಾಮದ ಬಳಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯ ಬಳಿ ಕೆಲ ರೈತರು ರಸ್ತೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಮಣ್ಣಿನ ಒಡ್ಡು ಹಾಕುವ ಮೂಲಕ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದು, ಬೂದಿಹಾಳ ಪಿ.ಎಚ್, ಓತಿಹಾಳ, ಹರನಾಳ ಗ್ರಾಮಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕು’ ಎಂದು ಆಗ್ರಹಿಸಿ ನಾಲ್ಕು ಗ್ರಾಮಗಳ ರೈತರು ಶುಕ್ರವಾರ ನಗರದ ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿದರು.

ಓತಿಹಾಳ ಗ್ರಾಮದ ಬಾಬು ನಾಟೀಕಾರ ಮಾತನಾಡಿ, ಬಂದಾಳ ಗ್ರಾಮದ ಬಳಿ ಹಾಗೂ ಬೂದಿಹಾಳ ಪಿ.ಎಚ್ ಗ್ರಾಮದ ಸರ್ಕಾರಿ ಶಾಲಾ ಹಿಂದಿನ ಡಾಂಬರೀಕರಣ ಮಾಡಿರುವ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ರಸ್ತೆ ಇಕ್ಕಟ್ಟು ಮಾಡಿದ್ದಾರೆ. ಎರಡೂ ಬದಿಗಳಲ್ಲಿ ಮಳೆ ನೀರು ಮುಂದೆ ಸಾಗದ ರೀತಿಯಲ್ಲಿ ರಸ್ತೆಯಲ್ಲಿಯೇ ಮಣ್ಣು ಹಾಕಲಾಗಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಖಾಸಗಿ ವಾಹನಗಳು, ಬೈಕ್ ಸವಾರರು, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಬಂದಾಳ ಮತ್ತು ಬೂದಿಹಾಳ ಪಿ.ಎಚ್ ಗ್ರಾಮಗಳ ಕೆಲ ರೈತರು ಉದ್ದೇಶಪೂರ್ವಕವಾಗಿ ರಸ್ತೆಯಲ್ಲಿ ಕಲ್ಲು, ಮುಳ್ಳು ಹಚ್ಚಿ ಮುಂದೆ ಸಾಗದಂತೆ ಕುಕೃತ್ಯ ಎಸಗಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದರು.

ಶಿವಾನಂದ ಸಾಲಿಮಠ, ಮಂಜುನಾಥ ಮಣೂರ, ನಾನಾಗೌಡ ಕೋಳೂರ, ಕೋರಬು, ಭೀಮಪ್ಪ ವಠಾರ, ಶಿವಪುತ್ರ ಬೂದಿಹಾಳ, ಬಂಗಾರಪ್ಪ ಗೌರ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬೂದಿಹಾಳ, ಓತಿಹಾಳ, ಬಂದಾಳ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪ್ರತಿಭಟನಕಾರರು ಉಪತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-26-634856670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.