ಸಿಂದಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ 2026-2031ರ ಅವಧಿಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಎರಡು ಬಣಗಳಾಗಿ ಇಬ್ಭಾಗಗೊಂಡು ಒಂದು ಬಣ ನಮ್ಮದು ಅಧಿಕೃತ. ರಾಜ್ಯ ಚುನಾವಣಾಧಿಕಾರಿಯಿಂದ ಅನುಮೋದಿಸಿರುವ ಪದಾಧಿಕಾರಿಗಳ ಪಟ್ಟಿ ನಮ್ಮದಾಗಿದೆ ಎಂದೆನ್ನುತ್ತಾರೆ. ಇನ್ನು ಚುನಾವಣೆ ನಿಯಮಾನುಸಾರ ನಡೆದಿಲ್ಲ. ಚುನಾವಣಾಧಿಕಾರಿ ಇಲ್ಲ, ನಾಮಪತ್ರ ಸಲ್ಲಿಕೆಯಾಗಿಲ್ಲ. ಕಳ್ಳತನದಲ್ಲಿಒಳಗೊಳಗೆ ತಮ್ಮದೊಂದು ಗುಂಪು ಮಾಡಿಕೊಂಡು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೊಂದು ಬಣದ ಆಕ್ಷೇಪವಾಗಿದೆ.

ಅಲ್ಲದೆ, ಚುನಾವಣೆ ನಾಮಪತ್ರ ಸಲ್ಲಿಕೆ ಕೊನೆಯ ದಿನವೂ ಚುನಾವಣಾಧಿಕಾರಿ, ಚುನಾವಣಾ ಕಚೇರಿಯೂ ಇರಲಿಲ್ಲ. ಹೀಗಾಗಿ ಅಂದೇ ರಾಜ್ಯ ಚುನಾವಣಾಧಿಕಾರಿ ಒಳಗೊಂಡು ಐವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ಜಯಶ್ರೀ ಬೆಣ್ಣಿ ದೂರು ಕೂಡ ಸಲ್ಲಿಸಿದ್ದರು ಎಂದು ಒಂದು ಬಣದ ಸಂಘದ ಪ್ರಧಾನ ಕಾರ್ಯದರ್ಶಿ ರಾಯಪ್ಪ ಇವಣಗಿ ಪ್ರತಿಕ್ರಿಯಿಸಿದ್ದಾರೆ.

ಶಿಕ್ಷಕರ ಈ ಚುನಾವಣಾ ಸಂಘರ್ಷ ಮತಕ್ಷೇತ್ರದ ಶಾಸಕರಾದಿಯಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಎರಡೂ ಬಣಗಳಿಂದ ದೂರು ಸಲ್ಲಿಕೆಯಾಗಿದೆ.

ರಾಜ್ಯ ಚುನಾವಣಾಧಿಕಾರಿ ಅನುಮೋದಿಸಿದ ಸಂಘದ ಪದಾಧಿಕಾರಿಗಳ ಆಯ್ಕೆ ಪಟ್ಟಿ: ಲಕ್ಷ್ಮಣ ಸೊನ್ನ(ಅಧ್ಯಕ್ಷ), ಶರಣಬಸಪ್ಪ ಲಂಗೋಟಿ (ಉಪಾಧ್ಯಕ್ಷ), ಎಫ್.ಎ. ಪಠಾಣ(ಉಪಾಧ್ಯಕ್ಷೆ), ಜಗದೇವಪ್ಪ ಸಿಂಗೆ (ಪ್ರಧಾನ ಕಾರ್ಯದರ್ಶಿ), ರಮೇಶ ಅಡಕಿ (ಖಜಾಂಚಿ), ಡಿ.ಎಚ್.ಚೌಧರಿ (ಸಹ ಕಾರ್ಯದರ್ಶಿ), ಭಾಗ್ಯಶ್ರೀ ತಡಲಗಿ (ಮಹಿಳಾ ಸಹ ಕಾರ್ಯದರ್ಶಿ). ಡಿ.ಸಿ.ಜಾಧವ (ಸಂಘಟನಾ ಕಾರ್ಯದರ್ಶಿ), ಸುಮಂಗಲಾ ಕೆಂಭಾವಿ (ಮಹಿಳಾ ಸಂಘಟನಾ ಕಾರ್ಯದರ್ಶಿ) ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಕೆ.ಚವ್ಹಾಣ (ನಿವೃತ್ತ ಶಿಕ್ಷಕ) ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಇನ್ನೊಂದು ಬಣದ ಸಂಘದ ಪದಾಧಿಕಾರಿಗಳು ಪಟ್ಟಿ-: ಎಸ್.ಎಂ.ಚಿಗರಿ (ಅಧ್ಯಕ್ಷೆ), ಬಿ.ಎಸ್. ಹಿರೇಮಠ, ಎಸ್.ಜಿ.ನಾರಾಯಣಕರ (ಉಪಾಧ್ಯಕ್ಷರು), ರಾಯಪ್ಪ ಇವಣಗಿ (ಪ್ರಧಾನ ಕಾರ್ಯದರ್ಶಿ), ಎಸ್.ಎಂ.ಕೂಡಗಿ (ಕೋಶಾಧ್ಯಕ್ಷ), ಬಿ.ಎಂ. ಗುಡಸಲಮನಿ, ಬಿಎನ್.ಭಜಂತ್ರಿ (ಸಹ ಕಾರ್ಯದರ್ಶಿಗಳು), ಐ.ಎಂ.ಯಲಗಾರ, ಎಸ್.ಡಿ.ಮೋರಟಗಿ (ಸಂಘಟನಾ ಕಾರ್ಯದರ್ಶಿಗಳು), ಜಯಶ್ರೀ ಬೆಣ್ಣಿ, ಜಿ.ಎನ್.ಪಾಟೀಲ, ಕೆ.ಎಸ್.ಪಾಟೀಲ, ಎಸ್.ಆರ್.ಹರನಾಳ( ನಿರ್ದೇಶಕರು) ಹಾಗೂ ಆರು ಜನ ನಾಮನಿರ್ದೇಶಿತ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಬಿ.ಸಿ. ಹಿರೇಮಠ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-26-1490518490

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.