ಸಿಂದಗಿ: ಇಲ್ಲಿನ ನಗರಸಭೆಯಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ಮನೆ, ಮನೆ ಕಸ ವಿಭಾಗದ ಪೌರ ಕಾರ್ಮಿಕರನ್ನು ತೆಗೆದುಹಾಕಲಾಗಿದೆ ಎಂದು 47 ಜನ ಪೌರ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿಯ ಪುರಸಭೆ ನಗರಸಭೆ ಆಗಿ ಮೇಲ್ದರ್ಜೆಗೇರಿದೆ. ನಗರಸಭೆಗೆ ಕಾಯಂ ಪೌರ ಕಾರ್ಮಿಕ ನೌಕರರ ಮಂಜೂರಾದ ಹುದ್ದೆಗಳ ಸಂಖ್ಯೆ 100. ಆದರೆ, ಕಾರ್ಯ ನಿರ್ವಹಿಸುವ ಕಾಯಂ ಪೌರ ಕಾರ್ಮಿಕರ ಸಂಖ್ಯೆ 51 ಇದೆ.

ನಗರದ 23 ವಾರ್ಡ್ಗಳು ವಿಸ್ತಾರಗೊಂಡಿದ್ದರಿಂದ ಕಡಿಮೆ ಸಂಖ್ಯೆಯ ಪೌರ ಕಾರ್ಮಿಕರಿಂದ ನಗರದ ಸ್ವಚ್ಛತೆ, ಚರಂಡಿ ಸ್ವಚ್ಛತೆ ಕೆಲಸಗಳು ಮರೀಚಿಕೆಯಾಗಿದೆ. ನಿತ್ಯ 15 ಟನ್ ಘನತ್ಯಾಜ್ಯ ಕಸ ಉತ್ಪತ್ತಿಯಾಗುತ್ತಿತ್ತು. ಆದರೆ, ಪೌರ ಕಾರ್ಮಿಕ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದಾಗಿ 10 ಟನ್ ತ್ಯಾಜ್ಯ ವಿಲೇವಾರಿಯಾಗುತ್ತಿದೆ ಎಂಬುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ನಗರಸಭೆಗೆ ಇನ್ನೂ 49 ಪೌರ ಕಾರ್ಮಿಕರನ್ನು ಭರ್ತಿ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 47 ಜನ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಮಹಿಳೆಯರಾದಿಯಾಗಿ ಪೌರ ಕಾರ್ಮಿಕರು ಇಲ್ಲಿಯ ನಗರಸಭೆ ಕಾರ್ಯಾಲಯ ಎದುರು ಧರಣಿ ನಡೆಸಿದ್ದರು. ಅದರಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ಎಲ್ಲ ಪೌರ ಕಾರ್ಮಿಕರು ಪರಿಶಿಷ್ಟ ಜನಾಂಗದವರಿದ್ದಾರೆ ಅವರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಸ್ಪಷ್ಟವಾಗಿದೆ. ಕೂಡಲೇ ಅವರ ಬಾಕಿ ವೇತನ ಪಾವತಿಸಿ ಕೂಡಲೇ ಕಸ ವಿಲೇವಾರಿ ಮಾಡಿಸಲಿ. ಸ್ವಚ್ಛ ಸಿಂದಗಿಯ ಕನಸು ಈಡೇರಲಿ’ ಎಂದು ರಾಜಶೇಖರ ಕೂಚಬಾಳ ಪ್ರತಿಕ್ರಿಯಿಸಿದ್ದಾರೆ.

ನಗರ ಸಂಚಾರ ಕೈಗೊಂಡು 13 ವಾರ್ಡ್ಗಳಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ನಿವಾಸಿಗಳಿಂದ ಸ್ವಚ್ಛತೆ, ಚರಂಡಿ ಸ್ವಚ್ಛಗೊಳಿಸುವ ಬೇಡಿಕೆ ಕೇಳಿ ಬಂದಿದ್ದವು. 23 ವಾರ್ಡ್ಗಳಲ್ಲಿ 51 ಪೌರ ಕಾರ್ಮಿಕರಿಂದ ಸ್ವಚ್ಛತಾ ಕೆಲಸ ಆಗುವುದಿಲ್ಲ ಎಂಬ ಕಾರಣಕ್ಕಾಗಿ ನಗರಸಭೆಗೆ 49 ಕಾಯಂ ಹುದ್ದೆಗಳು ಭರ್ತಿಯಾಗುವ ವರೆಗೆ ತಾತ್ಪೂರ್ತಿಕವಾಗಿ 20 ಕಾರ್ಮಿಕರ ಕೆಲಸ ಬಯಸಿದರೆ 40 ಜನರು ಬಂದರು. ಅವರಿಗೆ ಎರಡು ತಿಂಗಳ ಸಂಬಳವೂ ನೀಡಲಾಗಿದೆ. ಮುಂದೆ ಕಾಯಂ ಹುದ್ದೆಗಳ ಭರ್ತಿಯಲ್ಲಿ ಹಳೆಯ ಪೌರ ಕಾರ್ಮಿಕರಿಗೆ ಆದ್ಯತೆ ನೀಡಬಹುದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-26-1930747798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.