ಸಿಂದಗಿ: ನಗರದ ಸಾರಂಗಮಠದ ಆವರಣದಲ್ಲಿ ಗೋಶಾಲೆ ಸ್ಥಾಪಿಸಿ ಹಲವಾರು ವರ್ಷಗಳಿಂದ ದೇಸಿ ಹಸುಗಳ ಸಂರಕ್ಷಣೆ ಮಾಡಲಾಗುತ್ತಿದೆ. ಆದರೆ ಈ ವರ್ಷ ಹಸುಗಳಿಗೆ ಮೇವಿನ ಕೊರತೆ ಉಂಟಾಗಬಹುದಾಗಿದೆ. ಹೀಗಾಗಿ ಜೋಳದ ಅಥವಾ ಮೆಕ್ಕೆಜೋಳದ ಮೇವು ಉಳ್ಳವರು ಶ್ರೀಮಠದ ಗೋಶಾಲೆಗೆ ನೀಡಬೇಕು ಎಂದು ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷರಾದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಕೇಳಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಜೋಳ ಬೆಳೆಯುವ ಕೃಷಿಕ್ಷೇತ್ರ ಕಡಿಮೆಯಾಗುತ್ತಿದೆ. ಇದರಿಂದಾಗಿ ದೇಸಿ ಹಸು ತಳಿಗಳನ್ನು ಸಂರಕ್ಷಣೆ ಮಾಡಲು ತೊಂದರೆಯಾಗುತ್ತಿದೆ. ಮೇವು ಕೊಡಲು ಮುಂದಾಗಿ ನಮಗೆ ತಿಳಿಸಿದರೆ ಶ್ರೀಮಠದಿಂದ ವಾಹನ ವ್ಯವಸ್ಥೆ ಮಾಡಿ ಮೇವು ತರಿಸಿಕೊಳ್ಳಲಾಗುವುದು. ನಿಮ್ಮ ಸಹಾಯ ದೇಸಿ ಹಸುಗಳ ಸಂರಕ್ಷಣೆಗೆ ಸಹಕಾರಿಯಾಗುತ್ತದೆ’ ಎಂದು ಹೇಳಿದ್ದಾರೆ.

ದೇಸಿ ಆಕಳುಗಳ ಸಂರಕ್ಷಣೆಗಾಗಿ ಮೇವು ನೀಡುವ ಮೂಲಕ ಸಹಕರಿಸಬೇಕು ಎಂದು ಶ್ರೀಗಳು ಕೇಳಿಕೊಂಡಿದ್ದಾರೆ. ಮೇವು ದಾನಿಗಳು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು-9449819081, 9880723223, 8951903312, 9483376984.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-26-64775344

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.