ಸಿಂದಗಿ: ಮೋರಟಗಿಯಲ್ಲಿ ಈಚೆಗೆ ಮನೆಯ ಚಾವಣಿ ಕುಸಿದು ಸಾವಿಗೀಡಾದ ಕುಟುಂಬದ ಸದಸ್ಯರಿಗೆ ನಮ್ಮ ಮಠದಿಂದ ಅಂದಾಜು ₹10 ಲಕ್ಷ ಮೌಲ್ಯದ 30X40 ಅಳತೆಯ ಒಂದು ನಿವೇಶನ ನೀಡುವುದಾಗಿ ಮೋರಟಗಿ ವಿರಕ್ತಮಠದ ಗುರುಲಿಂಗ ಸ್ವಾಮೀಜಿ ಭರವಸೆ ನೀಡಿದರು.

ಮೃತನ ಪುತ್ರ ವೀರೇಶ ಬಡಿಗೇರ, ಮೃತನ ತಾಯಿ ಶಾಂತಾಬಾಯಿ ಬಡಿಗೇರ ಅವರನ್ನು ಶ್ರೀಗಳು ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ಕುಟುಂಬದ ವಾಸಕ್ಕಾಗಿ ಸೂರು ಅಗತ್ಯವಾಗಿರುವುದನ್ನು ಅರಿತುಕೊಂಡು ಅವರಿಗೆ ನಿವೇಶನ ನೀಡಲಾಗುವುದು. ಬಾಲಕನಿಗೆ ಉತ್ತಮ ಶಿಕ್ಷಣ ನೀಡುವಂತೆ ಅವರ ಅಜ್ಜಿ ಶಾಂತಾಬಾಯಿಗೆ ಶ್ರೀಗಳು ಕೇಳಿಕೊಂಡರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಗಪ್ರಸಾದ ತಿವಾರಿ, ಮೈಬೂಬಸಾಬ್ ಕಣ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-26-360875183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.