ಸೋಲಾಪುರ: ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ ವೀಜನ ವತಿಯಿಂದ ಏ.16ರಿಂದ 18ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ನಗರದ ಶಿವಸ್ಮಾರಕ ಸಭಾಂಗಣದಲ್ಲಿ ಬಸವ ಉಪನ್ಯಾಸಮಾಲೆ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಬುರಕುಲೆ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.16ರಂದು ಹಾಸ್ಯಕವಿ ಅನಿಲ ದೀಕ್ಷಿತ್ ಮತ್ತು ಬಾಲಚಂದ್ರ ಕೊಳಪಕರ ಅವರು ‘ಹಾಸ್ಯರಂಗ’ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ವಿಜಯಕುಮಾರ ದೇಶಮುಖ ನೆರವೇರಿಸಲಿದ್ದಾರೆ.

ಏ.17ರಂದು ಮುಂಬೈನ ಅಪೇಕ್ಷಾ ಚಾಕೋತೆ ‘ಸ್ತ್ರೀ ಸ್ವಾತಂತ್ರ್ಯದ ಉದ್ಘಾಟಕರು: ಮಹಾತ್ಮ ಬಸವೇಶ್ವರ’ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಈ ದಿನದ ಉದ್ಘಾಟನೆಯನ್ನು ಪೊಲೀಸ್ ಉಪ ಆಯುಕ್ತೆ ಡಾ. ಅಶ್ವಿನಿ ಪಾಟೀಲ ನೆರವೇರಿಸಲಿದ್ದು, ಉಪಮಹಾಪೌರ ಜ್ಞಾನೇಶ್ವರಿ ದೇವಕರ ಅಧ್ಯಕ್ಷತೆ ವಹಿಸಲಿದ್ದಾರೆ.

ಉಪನ್ಯಾಸಮಾಲೆಯ ಸಮಾರೋಪ ಏ.18ರಂದು ಪ್ರೊ.ಗಣೇಶ ಬೆಳಂಬೆ ಅವರ ‘ಐಸೆ ಕೈಸೆ ಝಾಲೆ ಭೋಂದು’ ವಿಷಯದ ಉಪನ್ಯಾಸದೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಸಚಿನ ಕಲ್ಯಾಣಶೆಟ್ಟಿ ನೆರವೇರಿಸಲಿದ್ದು, ಶಾಸಕ ದೇವೇಂದ್ರ ಕೊಠೆ ಅಧ್ಯಕ್ಷತೆ ವಹಿಸಲಿದ್ದಾರೆ.

ನಾಗೇಶ ಬಡದಾಳ, ಆನಂದ ದುಲಂಗೆ, ಸೋಮೇಶ್ವರ ಯಾಬಾಜಿ, ರಾಜೇಶ ನೀಲಾ, ಅವಿನಾಶ ಹತ್ತರಕಿ, ಸೋಮನಾಥ ಚೌಧರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-26-1101309725

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.