ಸೋಲಾಪುರ: ಜಿಲ್ಲಾ ಪರಿಷತ್ತಿನ ಜಲ ವ್ಯವಸ್ಥಾಪನಾ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ವೇಗವಾಗಿ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಜಿಲ್ಲಾ ಪರಿಷತ್ ಅಧ್ಯಕ್ಷ ದೀಪಕ್ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾ ಪರಿಷತ್ತಿನ ಶಿವರತ್ನ ಸಭಾಂಗಣದಲ್ಲಿ ಜಲವ್ಯವಸ್ಥಾಪನೆ ಮತ್ತು ಸ್ವಚ್ಛತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಯೋಜಿತ ಎಲ್ಲಾ ಯೋಜನೆಗಳ ಆರ್ಥಿಕ ಹಾಗೂ ಭೌತಿಕ ಪ್ರಗತಿಯ ತಾಲ್ಲೂಕುವಾರು ಸವಿಸ್ತಾರ ಪರಿಶೀಲನೆ ನಡೆಸಲಾಯಿತು.

2.0 ರಿಂದ 100 ಸಿಂಚನ ಸಾಮರ್ಥ್ಯದ ಸಣ್ಣ ನೀರಾವರಿ ಯೋಜನೆಗಳ ಅಡಿಯಲ್ಲಿ 0 ರಿಂದ 100 ಸಿಂಚನ ಸಾಮರ್ಥ್ಯದ ಕೊಲ್ಹಾಪುರ ಮಾದರಿಯ ಬಾಂದಾರ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಲ್ಲಿ ಜಿಲ್ಲಾ ಪರಿಷತ್ ಉಪಕರ ಪಾಜರ್ ಕೆರೆ ಹಾಗೂ ಗ್ರಾಮ ಕೆರೆಗಳ ದುರಸ್ತಿ, ಅಟಲ್ ಭೂಜಲ ಯೋಜನೆ, ಜಲಯುಕ್ತ ಶಿವಾರ ಅಭಿಯಾನ 2.0, ಗಾಳಮುಕ್ತ ಧರಣಿ – ಗಾಳಯುಕ್ತ ಶಿವಾರ ಯೋಜನೆ, 2025-26ನೇ ಸಾಲಿನ ಆರ್ಥಿಕ ಹಾಗೂ ಭೌತಿಕ ಪ್ರಗತಿ ವರದಿಯ ಅವಲೋಕನ ಮಾಡಲಾಯಿತು.

ಈ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ವೇಗವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಜಿಲ್ಲಾ ಪರಿಷತ್ ಉಪಾಧ್ಯಕ್ಷ ಇಂದ್ರಜಿತ ಪವಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಶಲ ಜೈನ, ಆರೋಗ್ಯ ಮತ್ತು ಶಿಕ್ಷಣ ಸಮಿತಿಯ ಸಭಾಪತಿ ಚೇತನಸಿಂಗ್ ಕೇದಾರ-ಸಾವಂತ, ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-26-449792285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.