ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಲ್ಲಾಪುರ ನಗರ; ಡೆಂಗಿ ಪ್ರಕರಣಗಳ ಹೆಚ್ಚಳ

Last Updated 20 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಸೊಲ್ಲಾಪುರ (ಮಹಾರಾಷ್ಟ್ರ): ಕೋವಿಡ್‌ನಿಂದ ಈಗಾಗಲೇ ತತ್ತರಿಸಿರುವಸೊಲ್ಲಾಪುರ ನಗರದ ಜನರನ್ನು ಇದೀಗ ಡೆಂಗಿ ಬಾಧಿಸತೊಡಗಿದೆ.ಪ್ರತಿದಿನ ಸರಾಸರಿ 10 ಡೆಂಗಿ ಪ್ರಕರಣಗಳು ವರದಿಯಾಗುತ್ತಿವೆ.ಅಗಸ್ಟ್ 1ರಿಂದ 20ರ ವರೆಗೆ ಒಟ್ಟು 87 ಜನರಲ್ಲಿ ಡೆಂಗಿ ಪತ್ತೆಯಾಗಿದೆ.

ನಗರದ ಶನಿವಾರ ಪೇಟೆ, ಬೇಗಂಪೇಟೆ, ಭವಾನಿ ಪೇಟೆ, ರವಿವಾರ ಪೇಟೆ, ಲಸ್ಕರ್, ಭಾಗ್ಯಶ್ರೀ ಪಾರ್ಕ್, ರೈಲ್ವೆ ಲೈನ್, ದಕ್ಷಿಣ ಸದರ್ ಬಜಾರ್, ಅಂಬೇಡ್ಕರ್ ನಗರ, ಲೋಕಮಾನ್ಯ ನಗರ, ಸಿದ್ದೇಶ್ವರ ನಗರ ಪರಿಸರಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚು ಕಂಡುಬಂದಿದೆ.

ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಸೊಲ್ಲಾಪುರ ಮಹಾನಗರ ಪಾಲಿಕೆ ಆಡಳಿತವು ನಿಯಂತ್ರಣಕ್ಕಾಗಿ ವಿಶೇಷ ಆರೋಗ್ಯ ತಂಡವನ್ನು ನೇಮಿಸಿದೆ. ಕೊಳಚೆ ನೀರು ನಿಲ್ಲದಂತೆ, ಸ್ವಚ್ಛತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಿದೆ.

ಡೆಂಗಿ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಲು ‘ಡಫ್ರೀನ್’ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ 10 ಹಾಸಿಗೆಗಳನ್ನು ಮೀಸಲಿಡಲಾಗಿದೆ.ಮುಂದಿನ ದಿನಗಳಲ್ಲಿ ಡೆಂಗಿ ರೋಗಿಗಳು ಹೆಚ್ಚು ಕಂಡುಬರುವ ಪ್ರದೇಶವನ್ನು ಕೆಂಪು ವಲಯ ಎಂದು ಘೋಷಿಸಲಾಗುವುದು. ಪ್ರತಿ ಮನೆಗೂ ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಸಮೀಕ್ಷೆ ಮಾಡಲಿದೆ ಎಂದುಮಹಾನಗರ ಪಾಲಿಕೆ ಉಪಾಯುಕ್ತ ಧನರಾಜ್ ಪಾಂಡೆ ‘ಪ್ರಜಾವಾಣಿ’ ತಿಳಿಸಿದರು.

ಡೆಂಗಿ ಪೀಡಿತರ ಮನೆಗೆ ಔಷಧ ಸಿಂಪಡನೆ, ಸ್ವಚ್ಛತೆ, ಮನೆಯ ಉಳಿದ ಸದಸ್ಯರ ಆರೋಗ್ಯ ತಪಾಸಣೆ ಮತ್ತು ಮನೆಯ ಕುಡಿಯುವ ನೀರಿನ ಟ್ಯಾಂಕ್‌ ತಪಾಸಣೆ ಮಾಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT