ಇಂಡಿ: ತಾಲ್ಲೂಕಿನಲ್ಲಿರುವ ಸುಮಾರು 110 ಕಿ.ಮೀ ಉದ್ದದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಹೂಳು ಮತ್ತು ಮುಳ್ಳಿನ ಗಿಡಗಂಟಿಗಳಿಂದ ತುಂಬಿಹೋಗಿದೆ. ಇದರಿಂದ ಮುಂದಿನ ಗ್ರಾಮಗಳ ಜನತೆಗೆ ಕಾಲುವೆಯ ನೀರು ಹರಿಯುತ್ತಿಲ್ಲ. ಸರ್ಕಾರ ಈ ಕೂಡಲೇ ಇಂಡಿ ತಾಲ್ಲೂಕಿನಲ್ಲಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯ ಹೂಳು ತೆಗೆಸಬೇಕು, ಅದರಲ್ಲಿನ ಮುಳ್ಳಿನ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕು ಎಂದು ವಿಜಯಪುರ ಜಿಲ್ಲಾ ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ ಹಾಗೂ ತಾಲ್ಲೂಕು ಜೆಡಿಎಸ್ ಮುಖಂಡ ಶ್ರೀಶೈಲಗೌಡ ಪಾಟೀಲ ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ.

ಕಾಲುವೆಯಲ್ಲಿ ಹೂಳು, ಗಿಡಗಂಟಿ ಗಳಿಂದ ನೀರು ಮುಂದೆ ಸಾಗಲು ಅಡಚಣೆಯುಂಟಾಗಿದೆ. ಇದರಿಂದ ಚಡಚಣ ಗ್ರಾಮಗಳಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಸರಾಗವಾಗಿ ನೀರು ಹರಿಯುತ್ತಿಲ್ಲ. ಸುಮಾರು 20 ವರ್ಷಗಳಿಂದ ಈ ಸಮಸ್ಯೆ ಇದೆ. ಪ್ರಸಕ್ತ ವರ್ಷ ಕೃಷ್ಣಾ ಕಾಲುವೆಗೆ ನೀರು ಹರಿಸುವ ಮುನ್ನ ಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಆಗಬೇಕು. ಕಾಲುವೆಯ ಕೊನೆಯ ಭಾಗ ದವರೆಗೂ ನೀರು ತಲುಪುವಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-287484787

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.