ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್ ಸಂಸಾರ’ ನಾಟಕ ಪ್ರದರ್ಶನ ಇಂದು

Last Updated 11 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ವಿಜಯಪುರ: ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್ ರಂಗ ತಂಡದ ಹೊಸ ನಗೆ ನಾಟಕ ‘ಸೂಪರ್ ಸಂಸಾರ’ ಮಾರ್ಚ್‌ 12 ರಂದು ಸಂಜೆ 6.30ಕ್ಕೆ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶಿತವಾಗಲಿದೆ.

ವಿಜಯಪುರ ಹೆಲ್ತಿ ರಿಕ್ರಿಯೇಶನ್ ಅಸೋಸಿಯೇಷನ್ ಮತ್ತು ವಿಜಯಪುರ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮಾನ್ಯುಮೆಂಟಲ್ ಸಿಟಿ ಸಹಯೋಗದೊಂದಿಗೆ ನಾಟಕ ಪ್ರದರ್ಶಿತವಾಗಲಿದೆ.

ಡಾ.ಯಶವಂತ ಸರದೇಶಪಾಂಡೆ ನಾಟಕ ಅನುವಾದಿಸಿ, ನಿರ್ದೇಶಿಸಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ನಾರಾಯಣ ರಾವ್ ಪಾತ್ರದಲ್ಲಿ ಧಾರವಾಡದ ವಕೀಲ ರವಿ ಕುಲಕರ್ಣಿ, ಕಲಾವಿದೆ ಮಾಲತಿ ಸರದೇಶಪಾಂಡೆ, ವಿಜಯಪುರದ ಪೂಜಾಮಣಿ ಜಹಗೀರದಾರ್, ರಂಗಕರ್ಮಿ ಕಿಟ್ಟಿ ಗಾಂವ್ಕರ್, ಪ್ರದೀಪ ಮುಧೋಳ, ಶಿಲ್ಪಾ ಪಾಂಡೆ (ಮೊಕಾಶಿ) ಅಭಿನಯಿಸುತ್ತಿದ್ದಾರೆ.

ಜೀವನ ಫರ್ನಾಂಡಿಸ್ ವಿಶೇಷವಾಗಿ ತಯಾರಿಸಿದ ರಂಗಸಜ್ಜಿಕೆ ಮತ್ತು ಸಂಗೀತ ಸಂಯೋಜನೆಯಲ್ಲಿ ನಾಟಕ ಪ್ರದರ್ಶನವಾಗಲಿದೆ. ಧಾರವಾಡದ ನಾಗರಾಜ ಪಾಟೀಲ್ ಬೆಳಕು ನಿರ್ವಹಣೆ ಮಾಡಿದ್ದಾರೆ. ಮುಂಬೈನ ಸಂತೋಷ ಪವಾರ್ ರಚಿಸಿದ ಈ ನಾಟಕಕ್ಕೆ ಬೆಂಗಳೂರಿನ ಪ್ರವೀಣ ಡಿ. ರಾವ್ ಸಂಗೀತ ನೀಡಿದ್ದಾರೆ.

‘ಸೂಪರ್ ಸಂಸಾರ’ ನಾಟಕವು ಹುಬ್ಬಳ್ಳಿ- ಧಾರವಾಡ, ದಾವಣಗೆರೆಯಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದು, ಪ್ರೇಕ್ಷಕರನ್ನು ರಂಜಿಸಿದೆ.

ಟಿಕೆಟ್‌ ಮಾರಾಟದಿಂದ ಬಂದ ಹಣವನ್ನು ಸಮಾಜ ಸೇವಾ ಕಾರ್ಯಕ್ಕೆ ಬಳಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9448128309/7019223615 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT