ತಾಳಿಕೋಟೆ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಏ.20ರಂದು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಬುಧವಾರ ನಿರ್ಧರಿಸಲಾಯಿತು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಡಾ.ವಿನಯಾ ಹೂಗಾರ, 12ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಯನ್ನು ತಂದ ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿ ವಿಜೃಂಭ ಣೆಯಿಂದ ಆಚರಿಸಲಾಗುವುದು ಎಂದರು.

ಏ.20ರಂದು ಬೆಳಿಗ್ಗೆ 8.30 ಘಂಟೆಗೆ ರಾಜವಾಡೆಯಿಂದ ಬಸವೇಶ್ವರರ ಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಮಾರ್ಗವಾಗಿ ಸಾಗಿ ಬಸವೇಶ್ವರ ವೃತ್ತಕ್ಕೆ ತಲುಪುವುದು. ನಂತರ ಅಲ್ಲಿಯೇ ವೇದಿಕೆ ಕಾರ್ಯಕ್ರಮ ಜರುಗುವುದು ಎಂದರು.

ಬಸವೇಶ್ವರ ಉತ್ಸವ ಸಮಿತಿ ಅಧ್ಯಕ್ಷ ಮಹಾಂತೇಶ ಮುರಾಳ ಮಾತನಾಡಿದರು. ಕಾಶಿನಾಥ ಮುರಾಳ, ಎಂ.ಎಸ್.ಸರಶಟ್ಟಿ, ಜಿ.ಜಿ. ಶರಣಗೌಡ ಪಾಟೀಲ, ಗಂಗಾಧರ ಕಸ್ತೂರಿ, ತಿಪ್ಪಣ್ಣ ಸಜ್ಜನ, ಪರಶುರಾಮ ತಂಗಡಗಿ, ರಾಜು ಸಜ್ಜನ, ಅಶೋಕ ಚಿನಗುಡಿ, ಎಂ.ಎಸ್. ನಾಗರಾಳ, ನಿಂಗಣ್ಣ ಕುಂಟೋಜಿ, ರವಿ ಚಂದುಕರ, ದತ್ತು ಉಬಾಳೆ, ಎಸ್.ಎಂ.ಪಾಲ್ಕಿ, ಲಂಕೇಶ ಪಾಟೀಲ, ಆರ್.ಬಿ.ದಮ್ಮೂರಮಠ, ಎಸ್.ಎಂ.ಪಡಶೆಟ್ಟಿ, ಸುಜಾತ ಯಡ್ರಾಮಿ, ಸುರೇಶ ಅಮರಣ್ಣವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-26-312768589

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.