ತಾಳಿಕೋಟೆ: ‘ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರು ಸದಾ ಸ್ಮರಣೀಯರಾಗಿದ್ದಾರೆ. ಅವರ ಇಡೀ ಬದುಕು ಹೋರಾಟದಿಂದ ಕೂಡಿದೆ. ಕೇವಲ ಜಯಂತಿ ಆಚರಿಸಿದರೆ ಸಾಲದು ಅವರ ಬದುಕಿನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಡಾ.ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು

ಶಿಕ್ಷಕಿ, ಸಾಹಿತಿ ಮಡಿವಾಳಮ್ಮ ಎಸ್.ಜಿ. ನಾಡಗೌಡ, ತಹಶೀಲ್ದಾರ್ ಗ್ರೇಡ್-2 ಪ್ರದೀಪ ದೇವಗಿರಿಕರ್, ಸಮಾಜದ ಮುಖಂಡರಾದ ಡಿ.ಬಿ.ಹಾದಿಮನಿ, ಗೋಪಾಲ ಕಟ್ಟಿಮನಿ ಹಾಗೂ ರಾಮಣ್ಣ ಕಟ್ಟಿಮನಿ ಮಾತನಾಡಿದರು.

ತಾ.ಪಂ. ಇಒ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಡಾ.ಶ್ರೀಶೈಲ ಹುಕ್ಕೇರಿ, ಶಿವಲಿಂಗಪ್ಪ ಹಚಡದ, ಮಹೇಶ ಜೋಶಿ, ರಾಜು ವಿಜಾಪುರ, ಯಮನಪ್ಪ ಕಟ್ಟಿಮನಿ, ಬಸ್ಸು ಮಾದರ, ಸಂಜೀವಪ್ಪ ಬರದೇನಾಳ, ಮಾದೇವ ಚಟ್ನಳ್ಳಿ , ದೇವಪ್ಪ ಮಾದರ, ಶೇಕಪ್ಪ ಹೋಳಗಿ, ಕಾಳಪ್ಪ ಮಾದರ, ಶಿವಪ್ಪ ಕಟ್ಟಿಮನಿ, ಪರಶುರಾಮ ಮಾದರ, ಬಾಗಪ್ಪ ಮಸ್ಕನಾಳ, ದ್ಯಾಮಣ್ಣ ಸೋಮನಾಳ, ಯಮನಪ್ಪ ಕೆಸರಟ್ಟಿ ಇದ್ದರು.

ಕಳೆದ ವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಹಾಗೂ ಚೊಕಾವಿ ಗ್ರಾಮದ ಪ್ರಗತಿಪರ ರೈತ ಹಣಮಂತ್ರಾಯ ನಾಟಿಕರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಾ.ಬಾಬು ಜಗಜೀವನರಾಂ ಚಿತ್ರದ ಮೆರವಣಿಗೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-26-1735771311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.