ತಾಳಿಕೋಟೆ: ಪಟ್ಟಣದ ಬಜಾರದ ಹನುಮಾನ ಮಂದಿರದ ಬಳಿಯಲ್ಲಿರುವ ಭೂಮಿಕಾ ಹೋಟೆಲ್ ನಲ್ಲಿ ಶುಕ್ರವಾರ ಬೆಳಿಗ್ಗೆ 7.30ರ ಸಮಯದಲ್ಲಿ ಸಿಲಿಂಡರ್ ಅನಿಲ ಸೋರಿಕೆಯಾಗಿ ಎಂಟು ಜನರಿಗೆ ಸುಟ್ಟ ಗಾಯಗಳಾದ ಘಟನೆ ಜರುಗಿದೆ.

ಹೋಟೆಲ್ ಮಾಲೀಕ ಬಸವರಾಜ ಕುಂಬಾರ ಎಂದಿನಂತೆ ಹೋಟೆಲ್ ಪ್ರಾರಂಭಿಸಿ ತಿಂಡಿ ತಯಾರಿಕೆಗೆ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಟವ್ ಬಳಿ ಸೋರಿಕೆಯಾದ ಅನಿಲದಿಂದ ಬೆಂಕಿಯ ಕೆನ್ನಾಲಿಗೆ ಹೋಟೇಲ್ನಲ್ಲಿ ಆವರಿಸಿತು. ಇದರಿಂದಾಗಿ ಹೋಟೆಲ್ನಲ್ಲಿದ್ದ ಎಂಟು ಜನರಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿವೆ. ತಕ್ಷಣ ಅವರಿಗೆ ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರಕ್ಕೆ ಕಳುಹಿಸಲಾಯಿತು.

ಇವರಲ್ಲಿ ಶಕೀಲ ಅಹಮ್ಮದ ಕುಂಬಾರವಾಡ (35), ಬಸೀರ ಅಹಮ್ಮದ ಕಡದಾಳ(42) ರಾಜಕುಮಾರ ಗೊಟಗುಣಕಿ (71) ಅವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಉಳಿದಂತೆ ಕಿರಣ್ ರಾಮಸಿಂಗ ಕೋಟಿಮನಿ (40), ಹೊಟೇಲ್ ಮಾಲೀಕ ಬಸವರಾಜ ಕುಂಬಾರ(45), ಗೂಡುಸಾಬ ಪಠಾಣ(68), ಭೀಮಪ್ಪ ನಾಲತ್ವಾಡ(47), ದವಲಸಾಬ ಮುದ್ನಾಳ(55), ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಅವರಿಗೆ ಚಿಕಿತ್ಸೆ ನೀಡಿದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾಶಿನಾಥ ಬಿರಾದಾರ ತಿಳಿಸಿದರು. ಘಟನಾ ಸ್ಥಳಕ್ಕೆ ಪಿಎಸ್ಐಗಳಾದ ಜ್ಯೋತಿ ಖೋತ, ಎಸ್.ಎಂ. ಪಡಶೆಟ್ಟಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-26-1618360402

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.