ತಾಳಿಕೋಟೆ: ದೇವರ ಹಿಪ್ಪರಗಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸುಸಜ್ಜಿತ ರಸ್ತೆ, ವಿದ್ಯುತ್, ಶಿಕ್ಷಣ ಹಾಗೂ ಆರೋಗ್ಯದ ವ್ಯವಸ್ಥೆ ಮಾಡಲು ಆದ್ಯತೆ ಮೇರೆಗೆ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಕ್ಷೇತ್ರದ ಜನರ ಸಹಕಾರ ಇರಲಿ ಎಂದು ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಹೇಳಿದರು.

ಅವರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ ಮೈಲೇಶ್ವರ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.

ಹೊಸಹಳ್ಳಿ ಗ್ರಾಮದಲ್ಲಿ ₹ 52 ಲಕ್ಷ ಮೊತ್ತದ ಜೆಜೆಎಂ ಕಾಮಗಾರಿ, ಗೊಟಖಂಡಕಿ ಗ್ರಾಮದಲ್ಲಿ₹ 50 ಲಕ್ಷ ಮೊತ್ತದ ಸಿಸಿ ರಸ್ತೆ ಹಾಗೂ ₹ 5 ಲಕ್ಷ ಮೊತ್ತದಲ್ಲಿ ಹನುಮಾನ ದೇವಸ್ಥಾನ ಹತ್ತಿರ ಸಮುದಾಯ ಭವನ, ಶಳ್ಳಗಿ ಗ್ರಾಮದಲ್ಲಿ ₹20 ಲಕ್ಷ ಮೊತ್ತದ ಡಾ. ಅಂಬೇಡ್ಕರ್ ಸಮುದಾಯ ಭವನ, ಮೈಲೇಶ್ವರ ಗ್ರಾಮದಲ್ಲಿ ₹50 ಲಕ್ಷ ಮೊತ್ತದ ಸಿಸಿ ರಸ್ತೆ ಹಾಗೂ ₹ 18 ಲಕ್ಷ ಮೊತ್ತದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಮುಖಂಡರಾದ ಎಂ.ಎಂ.ಪೊಲೀಸ್ ಪಾಟೀಲ, ವಿಶ್ವನಾಥ ರೆಡ್ಡಿ ನಾಡಗೌಡ, ಪಂಚಾಕ್ಷರಿ ಹಿರೇಮಠ, ಪ್ರಭುಗೌಡ ನಾಡಗೌಡ, ರಾಜುಗೌಡ ಕೋಳೂರ, ಶಂಕರಗೌಡ ದೇಸಾಯಿ, ಕಾಶೀರಾಯ ದೇಸಾಯಿ, ಸಿದ್ದರಾಮಪ್ಪ ಚೌದ್ರಿ ಮೈಲೇಶ್ವರ, ಉಮೇಶ ಬೂದಿಹಾಳ, ಶಿವಲಿಂಗಪ್ಪ ಕುಳಗೇರಿ, ಬಸವರಾಜ ಶಳ್ಳಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-26-514045968

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.