ತಾಳಿಕೋಟೆ: ಕೃಷಿ ಪಂಪ್ ಸೆಟ್ಗಳಿಗೆ ದಿನದ 10 ತಾಸಿನವರೆ ಹಗಲು ಹೊತ್ತಿನಲ್ಲಿ ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ನೇತೃತ್ವದಲ್ಲಿ ಹೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವನಗೌಡ ಪಾಟೀಲ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ತಾಳಿಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಮಾತನಾಡಿ, ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ದಿನದ 10 ಗಂಟೆಗಳವರೆಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಅನ್ನು ಸರಬರಾಜು ಮಾಡಬೇಕು. ತಾಲ್ಲೂಕಿನ ಬಮ್ಮನಳ್ಳಿ ಗುತ್ತಿಹಾಳ, ಬೋಳವಾಡ, ಫತ್ತೇಪೂರ- ಹೂವಿನಹಳ್ಳಿ, ತುಂಬಗಿ ಸೇರಿದಂತೆ ಇನ್ನುಳಿದ ಹಳ್ಳಿಗಳಲ್ಲಿ ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದ ಹೆಸ್ಕಾಂ ಇಲಾಖೆ ಕೇವಲ 2 ತಾಸುಗಳವರೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಮಧ್ಯದಲ್ಲಿ ವಿದ್ಯುತ್ ಸರಬರಾಜು ಪದೇ ಪದೇ ಕಡಿತಗೊಳಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪವನ ವಿದ್ಯುತ್, ಸೋಲಾರ ವಿದ್ಯುತ್, ಬೃಹತ್ ವಿದ್ಯುತ್ ಸ್ಥಾವರ ಎನ್ಟಿಪಿಸಿ ಇದ್ದರೂ ಸಮರ್ಪಕ ವಿದ್ಯುತ್ ಕೊಡದೆ ಬೇರೆ ರಾಜ್ಯಗಳಿಗೆ ಮಾರಿಕೊಳ್ಳುತ್ತಿದ್ದಾರೆ. ರೈತರ ಸಂಕಷ್ಟ ಅರಿತುಕೊಂಡು ಕೂಡಲೇ ವಿದ್ಯುತ್ ಸರಬರಾಜು ಗುಣಮಟ್ಟದಲ್ಲಿ ಕನಿಷ್ಠ 10 ತಾಸುಗಳವರೆಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಘಟಕದ ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ಸಂಗನಗೌಡ ಕೊಳೂರ, ಬಸವರಾಜ ಮಸರಕಲ್ಲ, ಶರಣಪ್ಪ ಕಲಬುರ್ಗಿ, ಭೀಮಣ್ಣ ಕದ್ದೆನಹಳ್ಳಿ, ಸಂಗಪ್ಪ ಕಲಬುರ್ಗಿ, ಶ್ರೀನಿವಾಸ ಗೊತಗುಣಕಿ, ಜಗದೀಶ ದೇಸಾಯಿ, ಶಿವಪುತ್ರಪ್ಪ ಕಟ್ಟಿಮನಿ, ಶಿವಪ್ಪ ಬಡಿಗೇರ, ಪರಶುರಾಮ ದ್ವಾರನಹಳ್ಳಿ, ಶರಣುಬಸು ಬೆಳ್ಳುಬ್ಬಿ, ಸಂಗಪ್ಪ ರಕ್ಕಸಗಿ, ಗುರುರಾಜ ಕಲಬುರ್ಗಿ, ಮಂಜುನಾಥ ಬಡಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-26-373541417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.