ತಾಳಿಕೋಟೆ: ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ಹಲವಾರು ದಿನಗಳಿಂದ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗದ ಕಾರಣ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದು ಈ ಗಂಭೀರ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್ ಡಾ.ವಿನಯಾ ಹೂಗಾರ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅನುಸೂಯಾ ಚಲವಾದಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ಹರನಾಳ ಗ್ರಾಮದಲ್ಲಿ ಜನರಿಗೆ ಕುಡಿಯಲು ಹಾಗೂ ಇತರೆ ದೈನಂದಿನ ಬಳಕೆಗೆ ಬೇಕಾದ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೆಲವು ಪ್ರದೇಶಗಳಲ್ಲಿ ನೀರು ಬಹಳ ದಿನಗಳಿಂದ ಸರಬರಾಜು ಆಗದೇ ಇರುವುದರಿಂದ ಗ್ರಾಮಸ್ಥರು ದೂರದ ಸ್ಥಳಗಳಿಗೆ ತೆರಳಿ ಹಣಕೊಟ್ಟು ನೀರು ತರುವ ದುಸ್ಥಿತಿ ಉಂಟಾಗಿದೆ. ಹಲವಾರು ದಿನಗಳಿಂದ ಈ ಸಮಸ್ಯೆ ಇದ್ದರೂ ಈಗ ಬೇಸಿಗೆಕಾಲ ಇರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಗ್ರಾಮದಲ್ಲಿ ನೀರು ಪೂರೈಕೆಯ ಯಾವುದೇ ಒಂದು ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ಪ್ರತಿದಿನವೂ ಜನರು ಶುದ್ಧ ನೀರಿಗಾಗಿ ಪರದಾಡುವಂಥಹ ಪರಿಸ್ಥಿತಿ ಉದ್ಭವಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಮಸ್ಥರಾದ ಬಸವರಾಜ ದುಂದಗಿ, ನಿಂಗನಗೌಡ ಬಿರಾದಾರ, ಪರಶುರಾಮ ನಾಗೂರ, ಡಿ.ಸಿ.ಚಳ್ಳಗಿ, ಗೋಪಾಲ ಕಟ್ಟಿಮನಿ ತಾಳಿಕೋಟಿ, ಹಣಮಂತ್ರಾಯ ಬೊಮ್ಮನಹಳ್ಳಿ, ನಿಂಗಪ್ಪ ನಾಗೂರ, ದೇವಪ್ಪ ಮೆಲ್ಡಾಪೂರ, ಮಾಳಪ್ಪ ಅಂಬಳನೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-26-635139998

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.