ತಾಳಿಕೋಟೆ: ತಾಲ್ಲೂಕಿನ ಸುಕ್ಷೇತ್ರ ಹೊಸಹಳ್ಳಿ ಗ್ರಾಮದಲ್ಲಿ ಮಾರುತೇಶ್ವರ ನೂತನ ಮಂದಿರ ಲೋಕಾರ್ಪಣೆ ಕಾರ್ಯಕ್ರಮವು ಮಾರ್ಚ್ 27ರಂದು ಜರುಗಲಿದೆ.

ಬೆಳಿಗ್ಗೆ 5 ಗಂಟೆಯಿಂದ ದೇವಸ್ಥಾನದ ಅರ್ಚಕರಿಂದ ಹೋಮ, ಹವನ ಮತ್ತು ಮಾರುತೇಶ್ವರ ಮಂದಿರ ಜೀರ್ಣೋದ್ಧಾರ ಮತ್ತು ಕಳಸಾರೋಹಣವನ್ನು ವೇ.ಬ್ರ.ವಿರೂಪಾಕ್ಷ ಭಟ್ಟ ಜೋಶಿ ಇಲಕಲ್ಲ ಹಾಗೂ ವೇದ ವಿಪ್ರೋತಮರಿಂದ ನೆರವೇರಿಸಲಾಗುವುದು.

ತಾಳಿಕೋಟೆ ತಾಲ್ಲೂಕು ಬ್ರಾಹ್ಮಣ ಸಮಾಜದ ಗಾಯಿತ್ರಿ ಭಜನಾ ಮಂಡಳಿ, ಮಹಾಲಕ್ಷ್ಮೀ ಭಜನಾ ಮಂಡಳಿ ಹಾಗೂ ವಿಜಯಪುರದ ಕಲ್ಪವೃಕ್ಷ ಪಾರಾಯಣ ಸಂಘ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದು.

ತುಲಾಭಾರ: ಸಂಜೆ 4 ಗಂಟೆಗೆ ಅಭಿನವ ಗಜದಂಡ ಶಿವಾಚಾರ್ಯರು ಬೃಹನ್ಮಠ ತೋಪಿನಕಟ್ಟಿ ದೇವರಭೂಪೂರ ಇವರಿಗೆ ಶಾಂತಗೌಡ ಅಯ್ಯಪ್ಪಗೌಡ ಪಾಟೀಲ ಇವರಿಂದ ತುಲಾಭಾರ ಜರುಗುವುದು. ವಿನಾಯಕ ಮೂರ್ತಿಗೆ ಬೆಳ್ಳಿ ಕಿರೀಟವನ್ನು ಭೀಮನಗೌಡ ಸಿದ್ದನಗೌಡ ಬಿರಾದಾರ ಅರ್ಪಿಸಲಿದ್ದಾರೆ.

ಮಾರುತೇಶ್ವರ ನೂತನ ಮಂದಿರದ ಲೋಕಾರ್ಪಣಾರ್ಥವಾಗಿ ಮಾರ್ಚ್ 28ರಂದು ಮಧ್ಯಾಹ್ನ 3 ಗಂಟೆಗೆ ಉಜ್ಜಿಯಿನಿಶ್ರೀ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು. ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದ್ದು ಉಜ್ಜಯಿನಿ ಶ್ರೀ, ಜಾಲಹಳ್ಳಿ ಶ್ರೀ, ಮಾಗಣಗೇರಿ ಶ್ರೀ, ಸಿಂದಗಿ ಸಾರಂಗಮಠ ಶ್ರೀ, ಶಿವಾಚಾರ್ಯರರು ಪಾಲ್ಗೊಳ್ಳುವರು. ಸಂಸದರು, ಶಾಸಕರು, ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದುಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-26-628616511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.