ತಾಳಿಕೋಟೆ: ಸ್ಥಳೀಯ ಶಾರದಾದೇವಿ ಮಹಿಳಾ ಮಂಡಳಿ ವತಿಯಿಂದ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಡಳಿಯ ಅಧ್ಯಕ್ಷೆಯಾಗಿದ್ದ ದಿವಂಗತ ಶಾಂತಾಬಾಯಿ ನೂಲೀಕರ ಅವರ ಚಿತ್ರಕ್ಕೆ ಗೌರವ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಿವೃತ್ತ ಶಿಕ್ಷಕಿ ಉಮಾ ಸಾಲಂಕಿ (ಕಸ್ತೂರಿ) ಮಾತನಾಡಿ, ಕೆಲಸ ಮಾಡುವ ಮಹಿಳೆಯರು ನಿತ್ಯವೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರಿಗೆ ಕಚೇರಿಯಲ್ಲಾಗಲಿ, ಸಮಾಜದಲ್ಲಾಗಲಿ ನಿರೀಕ್ಷಿತ ಗೌರವ, ಸಮಾನತೆಗಳು ಇಂದಿಗೂ ಪೂರ್ಣವಾಗಿ ಸಿಗುತ್ತಿಲ್ಲ. ಈ ದಿಸೆಯಲ್ಲಿ ಸಮಾಜ ತನ್ನ ದೃಷ್ಟಿಕೋನ ಬದಲಿಸಿಕೊಳ್ಳಬೇಕು. ಸಮಾಜ ಮತ್ತು ಸಂಸಾರಕ್ಕೆ ಮಹಿಳೆ ಮತ್ತು ಪುರುಷ ಎರಡು ಚಕ್ರಗಳಿದ್ದಂತೆ, ಅವು ಅಸಮವಾದರೆ ಬದುಕು, ಸಮಾಜ ಪ್ರಗತಿಯಾಗದು ಎಂದರು.

ಮಹಿಳಾ ಮಂಡಳದ ನೂತನ ಅಧ್ಯಕ್ಷೆ ಸುರೇಖಾ ಸಾಲಂಕಿ, ಮಹಿಳಾ ಸಬಲೀಕರಣಕ್ಕೆ ಮಂಡಳಿಯು ಸದಾ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.

ಉಮಾ ಸಾಲಂಕಿ ಅವರನ್ನು ಸನ್ಮಾನಿಸಲಾಯಿತು. ಲತಾ ಪ್ರಥಮಶೆಟ್ಟಿ ನಿರೂಪಿಸಿದರು. ಸೀಮಾ ಜಿ ಚವಾಣ ಸ್ವಾಗತಿಸಿ, ಪರಿಚಯಿಸಿದರು.

ನಿರ್ದೇಶಕಿಯರಾದ ರೇಣುಕಾ ಕಾರಜೋಳ, ಸುರೇಖಾ ಬಿಳೇಭಾವಿ, ಶೋಭಾ ಕಟ್ಟಿಮನಿ, ಸುವರ್ಣಾ ರಾಯಕರ್, ಮೀನಾಕ್ಷಿ ಪಾಟೀಲ, ಸುಮಂಗಲಾ ಕಲಬುರ್ಗಿ, ಪ್ರಭಾ ಕತ್ತಿ, ಸವಿತಾ ಕತ್ತಿ, ಗೀತಾ ಬಳಗಾನೂರ, ಸಾವಿತ್ರಿ ವಾಡಕರ, ಜಯಶ್ರೀ ಗಾವಡೆ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-26-757144649

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.