ತಾಳಿಕೋಟೆ: ತಾಲ್ಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ಪಟ್ಟಣದಲ್ಲಿಯೇ ನಿರ್ಮಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶುಕ್ರವಾರ 31ನೇ ದಿನ ಪೂರೈಸಿತು.

ಸತ್ಯಾಗ್ರಹದ ಸ್ಥಳಕ್ಕೆ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು.

’ಈ ಸಮಸ್ಯೆ ಕುರಿತು ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಹಿರಿಯ ಶಾಸಕರಾದ ಸಿ.ಎಸ್.ನಾಡಗೌಡ ಅವರು ಪುನರ್ ಪರಿಶೀಲನೆಗೆ ಒಪ್ಪಿದ್ದಾರೆ. ಹಳೆಯ ತಹಶೀಲ್ದಾರ್ ಕಚೇರಿ ಜಾಗ ಸೂಕ್ತ ಎನ್ನಲಾಗುತ್ತಿದೆ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಭರವಸೆ ನೀಡಿದರು.

ಫತ್ತೇಪುರ ಗ್ರಾಮದ ಚಂದ್ರಶೇಖರ್ ಚೌದ್ರಿ, ತಿಪ್ಪನಗೌಡ ಸೋಮನಾಳ, ವಿರುಪಾಕ್ಷಿ ಗೌಡ ಸೋಮನಾಳ, ಮೈಬುಷಾ ಮಕಾನದಾರ, ವಿಜಯಕುಮಾರ್ ಅಸ್ಕಿ, ಸುಭಾಷ್ ಸಿಗ್ನಳ್ಳಿ, ಜಟ್ಟೆಪ್ಪ ಪೂಜಾರಿ, ಹಳ್ಳೆಪ್ಪ ತಾಳಿಕೋಟಿ, ನಿಂಗಪ್ಪ ಹೊನ್ನಾಳಿ, ಚೆನ್ನಪ್ಪ ಕಿರದಳ್ಳಿ, ಸಿದ್ದಪ್ಪ ಹೊಸಮನಿ,ಮಡಿವಾಳಪ್ಪ ಹೊಸಮನೆ, ಸತೀಶ್ ತಾಳಿಕೋಟಿ, ನಾಗರಾಜು ತಾಳಿಕೋಟಿ, ಮಲ್ಲಪ್ಪ ಕಿರದಳ್ಳಿ, ಲಾಳೆಸಾಬ್ ನದಾಫ್, ಭೀಮರಾಯ ಮಡಿವಾಳರ, ಶರಣಗೌಡ ಹೆಬ್ಬಾಳ್ ದೇವೇಂದ್ರಪ್ಪ ಬಿರಾದಾರ್,ಮಲ್ಲಪ್ಪ ವಾಲಿಕಾರ್, ಶರಣು ದೊಡ್ಡಮನಿ,ರವೀಂದ್ರ ಹೊನ್ನಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-26-1897191183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.