ತಾಳಿಕೋಟೆ: ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬಳಿ ಪ್ರಜಾಸೌಧ ನಿರ್ಮಾಣ ನಾಗರಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಅದನ್ನು ತಾಳಿಕೋಟೆಯಲ್ಲಿಯೇ ನಿರ್ಮಿಸುವಂತೆ ಒತ್ತಾಯಿಸಿ ಸ್ಥಳೀಯ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಸತ್ಯಾಗ್ರಹವು ಮಂಗಳವಾರ 28 ದಿನ ಪೂರೈಸಿದೆ.

ಹೋರಾಟ ಸಮಿತಿಯ ಉಪಾಧ್ಯಕ್ಷ ರಾಮಣ್ಣ ಕಟ್ಟಿಮನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ತಾಲ್ಲೂಕಿನ ಜನರು 28 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಧರಣಿ ಸ್ಥಳಕ್ಕೆ ಭೇಟಿ ನೀಡದೇ ಇರುವುದು ಜನರನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ. ಇದು ಇಡೀ ತಾಲ್ಲೂಕಿನ ಜನತೆಗೆ ಮಾಡುತ್ತಿರುವ ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸತ್ಯಾಗ್ರದಲ್ಲಿ ಮಹಿಳೆಯರು ಬೆಂಬಲಿಸಿ ಭಾಗವಹಿಸಿದ್ದರು. ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಗೌರವಾಧ್ಯಕ್ಷ ಎಸ್.ಬಿ. ಕಟ್ಟಿಮನಿ, ಕಾರ್ಯಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಉಪಾಧ್ಯಕ್ಷರಾದ ಮುತ್ತಪ್ಪ ಚಮಲಾಪುರ, ಮಾಸೂಮಸಾಬ್ ಕೆಂಭಾವಿ, ವಿಜಯಸಿಂಗ್ ಹಜೇರಿ, ಮೆಹೆಬುಬ್ ಚೋರಗಸ್ತಿ, ಮುರಿಗೆಪ್ಪ ಸರಶೆಟ್ಟಿ, ಪರಶುರಾಮ ತಂಗಡಗಿ, ದತ್ತು ಹೆಬಸೂರ ಕಾಶೀನಾಥ ಸಜ್ಜನ, ರಾಜು ಹಂಚಾಟೆ, ಸುರೇಶ ಹಜೇರಿ, ಕಸ್ತೂರಿಬಾಯಿ ಪೂಜಾರಿ, ಮಲ್ಲಮ್ಮ ಲಿಂಗದಹಳ್ಳಿ, ಶಕುಂತಲಾ ಕರೀಬಾವಿ, ಸಾವಿತ್ರಿ ಪಾಟೀಲ, ಕವಿತಾ ದೊಡಮನಿ, ಪ್ರಕಾಶ ಹಜೇರಿ, ರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-26-1936933515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.