ತಾಳಿಕೋಟೆ: ‘ರಡ್ಡಿ ಸಮಾಜವು ಭವ್ಯ ಪರಂಪರೆ, ಸಂಸ್ಕೃತಿ, ಹಿರಿಮೆ ಹೊಂದಿದೆ. ನಾಡಿಗೆ ಅನೇಕ ಮಹನೀಯರನ್ನು, ಸಾಧಕರನ್ನು ಕೊಡುಗೆ ನೀಡಿದ ಶ್ರೇಯಸ್ಸು ನಮ್ಮ ಸಮಾಜದ್ದಾಗಿದೆ’ ಎಂದು ರಾಷ್ಟ್ರಕೂಟ ರಡ್ಡಿ ಪರಿವಾರದ ರಾಜ್ಯ ಸಂಸ್ಥಾಪಕ ಶ್ರೀನಿವಾಸ ರೆಡ್ಡಿ ಹೇಳಿದರು.

ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಹಿಂದೂ ರಡ್ಡಿ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ವಚನಕಾರ ವೇಮನ, ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿ, ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ನಮ್ಮವರು. ಹೀಗೆ ಸಾಧಕರ, ಶರಣರ ಪಟ್ಟಿ ದೊಡ್ಡದಿದೆ. ಇದನ್ನು ಯುವಪೀಳಿಗೆಗೆ ಪರಿಚಯಿಸುವ ಜೊತೆಗೆ ಸಮುದಾಯ ಒಗ್ಗೂಡಿಸುವ ಅವಶ್ಯಕತೆ ಇದೆ’ ಎಂದರು.

‘ಎಲ್ಲ ಕ್ಷೇತ್ರಗಳಲ್ಲೂ ರಡ್ಡಿ ಸಮಾಜಕ್ಕೆ ಆದ್ಯತೆ ಸಿಗಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆಯ ಅಗತ್ಯವಿದೆ. ಸಂಘಟಿತರಾಗುವುದು ಎಂದರೆ ಇತರ ಸಮುದಾಯದವರನ್ನು ಕಡೆಗಣಿಸುವುದಲ್ಲ. ಎಲ್ಲರೊಂದಿಗೆ ಬೆರೆತು, ಸೌಹಾರ್ದಯುತವಾಗಿ ಬಾಳುವುದು, ಈ ನಾಡಿನ ಅಭಿವೃದ್ಧಿಗೆ ಕೈಜೋಡಿಸುವುದು’ ಎಂದು ತಿಳಿಸಿದರು.

ಸೇಡಂನ ಸಾಹಿತಿ, ಚಿತ್ರನಟ ಮಹಿಪಾಲರೆಡ್ಡಿ ಮುನ್ನೂರು, ಪ್ರೊ.ಕನಕಗಿರಿ ಪಂಪಾರಡ್ಡಿ, ನಿರುಪಾದಪ್ಪ ಜೋಳದರಾಶಿ ಸಿನ್ನೂರ, ಮುಖ್ಯಶಿಕ್ಷಕಿ ಸುಮಂಗಲಾ ಕೋಳೂರ, ಶ್ರೀನಿವಾಸ ರೆಡ್ಡಿ, ಕೊಪ್ಪಾರೆಡ್ಡಿ, ಮಾಜಿ ಶಾಸಕ ಶಿವಪುತ್ರಪ್ಪ ಎಂ.ದೇಸಾಯಿ, ಎಸ್.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಸಮುದಾಯದ ಸಂಘಟನೆ ಕುರಿತು ಮಾತನಾಡಿದರು.

ಶ್ವೇತಾ ಯರಗಲ್ಲ ಪ್ರಾರ್ಥಿಸಿದರು, ಪ್ರಭುಗೌಡ ಮದರಕಲ್ಲ ಸ್ವಾಗತಿಸಿದರು, ಶಿಕ್ಷಕ ಅಪ್ಪಾಸಾಹೇಬ ಎಂ.ಮೂಲಿಮನಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೆಡ್ಡಿ ಸಮಾಜದ ಜನರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-154885598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.