ತಾಳಿಕೋಟೆ: ಪಟ್ಟಣದ ನಿವೃತ್ತ ಶಿಕ್ಷಕ ಜಿ.ಎಸ್.ಜಮ್ಮಲದಿನ್ನಿ ದಂಪತಿ ತಮ್ಮ 40ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.

ವಿಶ್ವ ಕಾರ್ಮಿಕ ದಿನದಂದೇ ತಮ್ಮ 40ನೇ ವಿವಾಹ ವಾರ್ಷಿಕೋತ್ಸವ ಕೂಡಿ ಬಂದಿರುವುದರಿಂದ ಈ ಮಹತ್ವದ ದಿನವನ್ನು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷಿ ಕಾರ್ಮಿಕರು, ಪೌರಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರನ್ನು ಶುಕ್ರವಾರ ಗೌರವಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.

ಕಾಯಕ ನಂಬಿ ಬದುಕುತ್ತಿರುವ ಈ ಕ್ಷೇತ್ರದ ಎಂಟು ಜನ ಕಾಯಕಯೋಗಿಗಳನ್ನು ತಮ್ಮ ಮನೆಗೆ ಆಮಂತ್ರಿಸಿ ಅವರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ಬಸವಾದಿ ಪ್ರಮಥರು ಕಾಯಕದಲ್ಲಿ ಕೈಲಾಸ ಕಂಡವರು, ಯಾವ ವೃತ್ತಿಯಾದರೂ ಚಿಕ್ಕದಲ್ಲ, ಅಗೌರವವಲ್ಲ, ಅದು ನ್ಯಾಯಸಮ್ಮತವಾಗಿರಬೇಕು ಎಂಬುದಾಗಿತ್ತು. ಅದರಂತೆ ಶ್ರಮಿಕರನ್ನು ನಮ್ಮ ವಿವಾಹ ವಾರ್ಷಿಕೋತ್ಸವದಂದು ಗೌರವಿಸಿದರೆ ಈ ದಿನದ ಮಹತ್ವ ಹೆಚ್ಚುತ್ತದೆ ಎಂದು ಜಿ.ಎಸ್. ಜಮ್ಮಲದಿನ್ನಿಯವರು ತಿಳಿಸಿದರು. ತನ್ಮೂಲಕ ಸಮಾಜದಲ್ಲಿ ಇತರರಿಗೂ ಮಾದರಿ ಕೆಲಸ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-26-1985148058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.