ತಾಳಿಕೋಟೆ: ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಸ್ಥಳದಲ್ಲಿ ತೊಗರಿ ಬೀಜಗಳಿಗೆ ಬೀಜೋಪಚಾರದ ಪ್ರಾತ್ಯಕ್ಷಿತೆಯನ್ನು ಕೈಗೊಂಡು ರೈತರಿಗೆ ಅದರಿಂದಾಗುವ ಅನುಕೂಲಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಅಧಿಕಾರಿ ಮಹೇಶ ಜೋಶಿ ಮಾತನಾಡಿ, ರೈತರು ತೊಗರಿ ಬೆಳೆಯಲ್ಲಿ ಅಗಲ ಸಾಲು ಬಿತ್ತನೆ, ಅಂತರ ಬೇಸಾಯ ಪದ್ಧತಿ, 45 ದಿನಗಳ ನಂತರ ಕುಡಿ ಚಿವುಟುವುದು ಮತ್ತು ಪಲ್ಸ್ ಮ್ಯಾಜಿಕ್ ಪಲ್ಸ್ ಬುಸ್ಟರ್ ಉಪಯೋಗದಿಂದಾಗಿ ತೊಗರಿ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಬಹುದು. ಸದ್ಯ ಕೇಂದ್ರದಲ್ಲಿ 114 ಕ್ವಿಂಟಲ ತೊಗರಿ, 60 ಕೆಜಿ ಹೆಸರು, 960 ಕೆಜಿ ಮೆಕ್ಕೆಜೋಳ, 150 ಕೆಜಿ ಸೂರ್ಯಕಾಂತಿ, 150 ಕೆಜಿ ಹೈಬ್ರಿಡ್ ಸಜ್ಜೆ ದಾಸ್ತಾನಿಕರಿಸಲಾಗಿದೆ ಎಮದು ತಿಳಿಸಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಡಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್, ರವಿ ಗೌಡ ಪಾಟೀಲ, ಹನುಮಂತರಾಯಗೌಡ ಗೂಗಲ್, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಾದ ಸಂಗಮೇಶ ಪಾಟೀಲ, ಕಿರಣ ಬೊಮ್ಮನಹಳ್ಳಿ, ಹನುಮಂತರಾಯ ಕುಂಟರೆಡ್ಡಿ, ವಿರುಪಾಕ್ಷಿ ನಂದಿಕೋಲ, ಬಸವರಾಜ ಜಾಲವಾದಿ, ಹಿರಗಪ್ಪ ಅರಳಿಕಟ್ಟಿ ಹೋಬಳಿ ವ್ಯಾಪ್ತಿಯ ರೈತರು ಮತ್ತು ಕೃಷಿ ಸಖಿಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-1914978467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.