ತಾಳಿಕೋಟೆ: ಮಹಾತ್ಮರು, ದಾರ್ಶನಿಕರು, ಶರಣರು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ತರುತ್ತಾರೆ. ಅವರ ಜೀವನ ಚರಿತ್ರೆ ತಿಳಿದುಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಬೇಕು. ಅವರ ಆದರ್ಶ ಬದುಕು ನಮಗೆ ದಾರಿದೀಪವಾಗಿದೆ ಎಂದು ನಾವದಗಿ ಬೃಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸುಕ್ಷೇತ್ರ ಶಳ್ಳಗಿ ಗ್ರಾಮದಲ್ಲಿ ಬಸವಂತ್ರಾಯ ಹಾಗೂ ಪರಮಣ್ಣ ಮುತ್ಯಾ ದೇವಸ್ಥಾನದ 2ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡ ಕಲ್ಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರಾರಂಭೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾಗಣಗೇರಿಯ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ, ಇಂತಹ ಪುರಾಣ ಪ್ರವಚನಗಳ ಮೂಲಕ ಮಹಾತ್ಮರ ಜೀವನವನ್ನು ತಿಳಿದುಕೊಳ್ಳುವುದರಿಂದ ಬದುಕು ಸಾರ್ಥಕವಾಗುತ್ತದೆ. ಜಾತ್ರೆ ಪುರಾಣ ಪ್ರವಚನಗಳು ನಮ್ಮ ಮಧ್ಯ ಪ್ರೀತಿ ವಿಶ್ವಾಸ ಹಾಗೂ ಭ್ರಾತೃತ್ವವನ್ನು ಬೆಳೆಸುತ್ತವೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರು.

ಪುರಾಣಿಕ ವೇದ ಮೂರ್ತಿ ಬಸಯ್ಯ ಸೋಮಶೇಖರ ಮಠ(ಯಾಳಗಿ) ಅವರು ಮೊದಲು ದಿನದ ಪುರಾಣದಲ್ಲಿ ಶ್ರೀ ಶರಣ ಬಸವೇಶ್ವರರ ಬಾಲ್ಯದ ಕುರಿತು ವಿವರಿಸಿದರು. ವೇ.ಮೂ.ಮಲ್ಲಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಕೆ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೇದ ಮೂರ್ತಿ ಮಲ್ಲಯ್ಯಸ್ವಾಮಿ ಹಿರೇಮಠ, ಮಲ್ಲಯ್ಯ ಸ್ವಾಮಿ ಆರ್ ಮಠ, ಪರಮಣ್ಣ ಶರಣರು, ಕೆ ಸಿ ದೇಸಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-26-1973552867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.