ತಾಳಿಕೋಟೆ: ‘ರಸ್ತೆ ಸಾರಿಗೆ ನಿಗಮದಲ್ಲಿ 25ರಿಂದ 30 ವರ್ಷಗಳವರೆಗೆ ತಮ್ಮ ಸೇವೆಯನ್ನು ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಯ ಪಾಲನೆಯೊಂದಿಗೆ ಸಲ್ಲಿಸಿ ನಿವೃತ್ತಿ ಹೊಂದಿದ ಮೂವರು ನೌಕರರು ನಿಗಮಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಅದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅವರ ನಿವೃತ್ತಿ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲೆಂದು ಹಾರಿಸುತ್ತೇನೆ’ ಎಂದು ಸ್ಥಳೀಯ ಸಾರಿಗೆ ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಹೇಳಿದರು.

ಅವರು ಪಟ್ಟಣದ ಸಾರಿಗೆ ಘಟಕದಲ್ಲಿ ಸೇವೆಯನ್ನು ಸಲ್ಲಿಸಿ ವಯೋನಿವೃತ್ತರಾದ ಸಾರಿಗೆ ನಿಯಂತ್ರಕ ಎಂಎಂ ಕಲ್ಲಪ್ಪಗೋಳ, ಚಾಲಕರಾದ ಎ.ಎನ್.ತಾಳಿಕೋಟಿ ಹಾಗೂ ಎ.ಎಂ. ಮನಿಯಾರ ಅವರಿಗೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಸಾರಿಗೆ ಘಟಕ ನೌಕರರ ಸಂಘ, ಇಂಟೆಕ್ ಯೂನಿಯನ್, ನೌಕರರ ಒಕ್ಕೂಟ, ಎಸ್ಸಿ, ಎಸ್ಟಿ ವಿಭಾಗ, ಬಿಎಂಎಸ್ ವಿಭಾಗ, ಮುಸ್ಲಿಂ ಯೂನಿಯನ್, ಸಾರಿಗೆ ಸಂಸ್ಥೆ ನಿವೃತ್ತ ನೌಕರರು, ನಿವೃತ್ತ ನೌಕರರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಚಾರಿ ನಿರೀಕ್ಷಕರಾದ ನಿಂಗನಗೌಡ, ಎಸ್.ಪಿ.ಆಲ್ಯಾಳ, ಪಾರು ಪತ್ತೆಗಾರರಾದ ಎಸ್.ಬಿ.ಬಿದರಕುಂದಿ, ಟಿ.ಬಿ.ರಾಠೋಡ, ಯೂನಿಯನ್ ಪದಾಧಿಕಾರಿಗಳಾದ ಜಿ.ಜಿ.ಬಿರಾದಾರ, ಎಸ್.ಬಿ. ಅಸ್ಕಿ, ಎಂ.ಎಂ.ಚಲವಾದಿ, ಕೆ.ಕೆ.ಗಣಾಚಾರಿ, ಎ.ಎಂ.ಅವಟಿ, ಘಟಕದ ಸಿಬ್ಬಂದಿ ಹಾಗೂ ನಿವೃತ್ತರ ಕುಟುಂಬದ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-26-998775482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.