ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಬಾ ನವರಾತ್ರಿ ಉತ್ಸವ; ಉಚಿತ ನೇತ್ರ ತಪಾಸಣೆ

Last Updated 27 ಸೆಪ್ಟೆಂಬರ್ 2022, 15:45 IST
ಅಕ್ಷರ ಗಾತ್ರ

ತಾಂಬಾ: ಪ್ರತಿಯೊಬ್ಬರು ಮರಣದ ನಂತರ ನೇತ್ರದಾನ ಮಾಡಲು ಮುಂದಾಗಬೇಕು ಎಂದುಅನುಗ್ರಹ ಆಸ್ಪತ್ರೆಯ ವೈದ್ಯ ಡಾ. ಪ್ರಭುಗೌಡ ಲಿಂಗದಳಿ ಹೇಳಿದರು.

ಶ್ರೀ ಅಂಬಾಭವಾನಿ ಎಜ್ಯುಕೇಶನ್ ಟ್ರಸ್ಟ್ ಹಾಗೂ ತಾಂಬಾ ಶ್ರೀ ಜ.ವಿ.ವ ಸಂಘದ ಆಶ್ರಯದಲ್ಲಿ51ನೇ ನಾಡದೇವಿ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜ.ವಿ.ವ ಸಂಘದ ಕಾರ್ಯದರ್ಶಿ ರವಿಕುಮಾರ ಚವ್ಹಾಣ ಮಾತನಾಡಿ, ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಬಹಳ ಮುಖ್ಯ, ವಯಸ್ಸು ಆದ ವೃದ್ಧರು ಸಕಾಲಕ್ಕೆ ತಪಾಸಣೆ ಮಾಡಿದರೆ ಕಣ್ಣಿನ ಪೂರೆಗಳು ಬರುವುದು ಕಡಿಮೆ, ಯುವಕರು ಬೈಕ್‌ ಚಾಲನೆ ಮಾಡುವ ಸಂದರ್ಭದಲ್ಲಿ ಹೆಲ್ಮೆಟ್‌ ಅಥವಾ ಕನ್ನಡಕವನ್ನು ಬಳೆಸುವುದು ಬಹಳ ಮುಖ್ಯ ಎಂದರು.

ಕಣ್ಣುಗಳು ಜೀವನದಲ್ಲಿ ಜೀವನ ಮಾಡಲು ಬಹಳ ಮುಖ್ಯ, ಕಣ್ಣು ಮನುಷ್ಯನ ಜೀವನದ ಬಹಳ ಪ್ರಾಮುಖ್ಯ ಅಂಗವಾಗಿದೆ. ಜೀವನದಲ್ಲಿ ಯಾವುದೇ ಕಾರ್ಯ ಮಾಡಬೇಕಾದರೆ ಕಣ್ಣಿನ ಪ್ರಾಮುಖ್ಯತೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಡಾ.ಅರವಿಂದ ಮೇತ್ರಿ, ಅಸ್ಲಾಂ ಪಟೇಲ ಬಿರಾದಾರ, ಶಂಕರ ಚವ್ಹಾಣ, ವಿಜಯಕುಮಾರ ದೊಡ್ಡಮನಿ, ರಾಯಗೊಂಡ ಪೂಜಾರಿ, ಪ್ರಕಾಶ ಡೊಡ್ಡಮನಿ, ಗುರು ಚಿಂಚೊಳ್ಳಿ, ತಾಂಬಾ ಪ್ರಾ.ಥ.ಆರೋಗ್ಯ ಕೇಂದ್ರ ಸಿಬ್ಬಂದಿ ಶಿವು ಮೂಲಿಮನಿ ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT