ಗುರುವಾರ , ಆಗಸ್ಟ್ 18, 2022
25 °C
ತಾಂಡಾ ಅಭಿವೃದ್ಧಿ ನಿಗಮದ ನಡೆ ತಾಂಡಾ ಕಡೆ ಅಭಿಯಾನಕ್ಕೆ ಚಾಲನೆ

ವಿಜಯಪುರ: ಕೋವಿಡ್‌ ಲಸಿಕೆ ಪಡೆಯಲು ತಾಂಡಾ ವಾಸಿಗಳಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದಿಂದ ಕೂಡಗಿ ತಾಂಡಾದಲ್ಲಿ  ಹಮ್ಮಿಕೊಂಡಿದ್ದ ‘ತಾಂಡಾ ಅಭಿವೃದ್ಧಿ ನಿಗಮದ ನಡೆ ತಾಂಡಾ ಕಡೆ’ ಕಾರ್ಯಕ್ರಮಕ್ಕೆ ನಿಗಮದ ಅಧ್ಯಕ್ಷರಾದ ಕುಡಚಿ ಶಾಸಕ ಪಿ.ರಾಜೀವ್ ಚಾಲನೆ ನೀಡಿದರು.

ತಾಂಡಾ ಅಭಿವೃದ್ಧಿ ನಿಗಮವು ತಾಂಡಾಗಳ ಜನರ ಸುರಕ್ಷತೆಗಾಗಿ ಕೋವಿಡ್‌ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿ ತಾಂಡಾದಲ್ಲೂ ಈ ಅಭಿಯಾನ ನಡೆಯಲಿದೆ. ತಾಂಡಾ ವಾಸಿಗಳು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಹಬ್ಬ, ಜಾತ್ರೆ, ಧಾರ್ಮಿಕ ಆಚರಣೆಗಳನ್ನು ಸದ್ಯ ಮಾಡದೇ ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ತಾಂಡಾಗಳ ಅಭಿವೃದ್ಧಿಗೆ ನಿಗಮವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಿಜಯಪುರದ ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆಯ ಮಧುಮೇಹ ತಜ್ಞರು ಡಾ.ಬಾಬುರಾಜೇಂದ್ರ ನಾಯಿಕ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌ ತಡೆಗೆ ಸಾಕಷ್ಟು ಆದ್ಯತೆ ನೀಡಿದೆ. ಜೂನ್‌ 21ರಿಂದ 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ನೀಡುತ್ತಿದೆ. ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಪಡೆದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಜಗನು ಮಹಾರಾಜರು ಸಾನಿಧ್ಯ ವಹಿಸಿದ್ದರು. ಕೋವಿಡ್ ಅರಿವು ಮತ್ತು ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ, ತಾಂಡಾ ಅಬಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ ನಾಯ್ಕ, ಸೋಮಲಿಂಗ ಸ್ವಾಮೀಜಿ, ಗೋಪಾಲ ಮಹಾರಾಜ, ಗ್ರಾಮ ಪಂಚಾಯತಿ ಅಧ್ಯಕ್ಷ ಶೇಕುಬಾಯಿ ಅರ್ಜುನ ರಾಠೋಡ, ಮತ್ತು ಕಂದಾಯ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಂತೋಷ ನಾಯಕ, ವಿಜಯಪುರ ವಲಯ ಅಬಿವೃದ್ಧಿ ಅಧಿಕಾರಿ ವಸಂತ ಪವಾರ, ವೈದ್ಯರಾದ ಡಾ.ರವಿ ನಾಯಿಕ, ಪಿ.ಎಸ್. ಐ. ರೇಣುಕಾ ಜಕನೂರ, ಗ್ರಾಮ ಪಂಚಾಯ್ತಿ ಅಬಿವೃದ್ಧಿ ಅಧಿಕಾರಿ ಎ.ಎಸ್. ಕೊಟ್ಯಾಳ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗೋವಿಂದರಾಜ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು