ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ, ಸಾಂಸ್ಕೃತಿಕ ಉತ್ಸವ: ವಿಜೇತರಿಗೆ ಗೌರವ

ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜನೆ
Last Updated 3 ಡಿಸೆಂಬರ್ 2022, 13:48 IST
ಅಕ್ಷರ ಗಾತ್ರ

ವಿಜಯಪುರ: ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿಕ್ಯಾಬ್‌ ಮಲಿಕ್‌ ಸಂದಲ್ ಆರ್ಕಿಟೆಕ್ಚರ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಎರಡು ದಿನಗಳ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿತು.

ನಗರದ ವಿವಿಧ ಪಿ.ಯು ಕಾಲೇಜುಗಳ ವಿಜ್ಞಾನ ವಿಭಾಗದ ಒಟ್ಟು 600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಿ.ಯು. ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ, ನೀಟ್, ಜೆಇಇ ಪ್ರಿಪರೇಟರ್‌ ಟೆಸ್ಟ್‌, ವೈಜ್ಞಾನಿಕ ಮಾದರಿಗಳ ಪ್ರದರ್ಶನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿಜ್ಞಾನ ರಸಪ್ರಶ್ನೆಯಲ್ಲಿ ಸಿಕ್ಯಾಬ್‌ ಪಿ.ಯು. ಕಾಲೇಜಿನ ವಿದ್ಯಾರ್ಥಿ ಹಾರೀಸ್‌ ಮನಿಯಾರ ತಂಡ ಪ್ರಥಮ ಸ್ಥಾನ ಪಡೆದು, ₹ 6 ಸಾವಿರ ನಗದು ಬಹುಮಾನ ಬಾಚಿಕೊಂಡಿತು. ಚೇತನಾ ಪಿಯು ಕಾಲೇಜಿನ ವಿದ್ಯಾರ್ಥಿ ಆಕಾಶ ತಳವಾರ ತಂಡ ದ್ವಿತೀಯ ಸ್ಥಾನದೊಂದಿಗೆ ₹4 ಸಾವಿರ ನಗದು ಬಹುಮಾನ ಗಳಿಸಿತು.

ಶಾರ್ಪ್‌ ಬ್ರೇನ್ಸ್‌ ನೀಟ್/ಜೆಇಇ ಪ್ರಿಪರೇಟರ್‌ ಟೆಸ್ಟ್‌ನಲ್ಲಿ ಚೇತನಾ ಪಿ.ಯು.ಕಾಲೇಜಿನ ವಿದ್ಯಾರ್ಥಿ ಪುನೀತ್‌ ಅಡವಿ ಪ್ರಥಮ ಸ್ಥಾನ ಪಡೆದು ₹ 5 ಸಾವಿರ ನಗದು ಬಹುಮಾನ ಬಾಚಿಕೊಂಡರು. ಇದೇ ಕಾಲೇಜಿನ ವಿದ್ಯಾರ್ಥಿನಿ ಸಾವಿತ್ರಿ ಕಲ್ಲೋಳ್ಳಿಯ ದ್ವಿತೀಯ ಸ್ಥಾನದೊಂದಿಗೆ ₹2,500 ನಗದು ಬಹುಮಾನಕ್ಕೆ ಪಾತ್ರರಾದರು.

ವೈಜ್ಞಾನಿಕ ಮಾದರಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಚೇತನಾ ಪಿ.ಯು. ಕಾಲೇಜಿನ ಆಕಾಶ ಕುಂಬಾರ ಮತ್ತು ಜಹೀರ ಅಹ್ಮದ ಅಥಣಿ ತಂಡ ಪ್ರಥಮ ಸ್ಥಾನದೊಂದಿಗೆ ₹5 ಸಾವಿರ ನಗದು ಬಹುಮಾನ ಪಡೆದುಕೊಂಡಿತು. ಇದೇ ಕಾಲೇಜಿನ ರೋಹಿತ್‌ ದಾಶ್ಯಾಳ ಮತ್ತು ಮಲ್ಲಿಕಾರ್ಜುನ ನಿವರಗಿ ತಂಡ ದ್ವಿತೀಯ ಸ್ಥಾನದೊಂದಿಗೆ ₹2,500 ನಗದು ಬಹುಮಾನ ಪಡೆಯಿತು.

ತಾಜಬಾವಡಿಯ ಸಿಕ್ಯಾಬ್‌ ಪಿ.ಯು ಕಾಲೇಜಿನ ನಾಹೀದ ನಾಡೇವಾಲೆ, ಸಲೇಹಾ ಇನಾಮದಾರ ತಂಡ ಸಮಾಧಾನಕರ ಬಹುಮಾನ ಪಡೆಯಿತು.

ಟೆಕ್‌ಟ್ರೋನ್‌ ತಾಂತ್ರಿಕ ಸಾಫ್ಟವೇರಗಳ ಸ್ಪರ್ಧೆಯಲ್ಲಿ ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ವಿಭಾಗದ 7ನೇ ಸೆಮಿಸ್ಟರ್‌ ವಿದ್ಯಾರ್ಥಿನಿ ಸುಮಯ್ಯಾ ದಳವಾಯಿ ಪ್ರಥಮ ಸ್ಥಾನ ಪಡೆದುಕೊಂಡರು.

ಮೆಗಾ ಟ್ಯಾಲೆಂಟ್‌ ಶೋ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮೂರನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ವಿನ್ನರ್‌ ಟ್ರೋಫಿ ಪಡೆದುಕೊಂಡರು. ಇದೇ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಟ್ರೋಫಿ ಮಲಿಕ್‌ ಸಂದಲ್ ಆರ್ಕಿಟೆಕ್ಚರ್‌ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.

ಸಿಕ್ಯಾಬ್‌ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ಕಾಲೇಜಿನ ಬಿಸಿಎ ವಿದ್ಯಾರ್ಥಿ ಅಖಿಲಾ ಶಿಂಧೆ ಉತ್ತಮವಾಗಿ ಕೊಳಲು ಬಾರಿಸುವ ಮೂಲಕ ಅತ್ಯುತ್ತಮ ಪ್ರತಿಭಾ ಪ್ರದರ್ಶನ ಪ್ರಶಸ್ತಿ ಪಡೆದುಕೊಂಡರು.

ಪ್ರಶಸ್ತಿ ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಸಿಕ್ಯಾಬ್‌ ಸಂಸ್ಥೆಯ ಅಧ್ಯಕ್ಷ ಎಸ್‌. ಎ. ಪುಣೇಕರ್‌, ನಿರ್ದೇಶಕ ಸಲಾಹುದ್ದೀನ ಪುಣೇಕರ, ಕಾಲೇಜಿನ ಪ್ರಾಂಶುಪಾಲ ಡಾ.ಆರ್.‌ಬಿ.ಕದೀರನಾಯ್ಕರ ಅಭಿನಂದಿಸಿದರು.

ಎರಡು ದಿನ ಕಾಲೇಜಿನ ಆವರಣ ವಿದ್ಯಾರ್ಥಿಗಳ ಕಲರವದಿಂದ ಕೂಡಿತ್ತು. ಪಿ.ಯು. ಕಾಲೇಜುಗಳ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಪ್ರಾತ್ಯಕ್ಷಿಕೆಗಳನ್ನು ಕುತೂಹಲದಿಂದ ನೋಡಿ ಆನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT