ಬಸವನಬಾಗೇವಾಡಿ: ಪಟ್ಟಣದ ಶಹರ ಗಜಾನನ ಮಂಡಳಿಯಿಂದ ಗುರುವಾರ ಆಯೋಜಿಸಿದ್ದ ಎತ್ತಿನಬಂಡಿ ಜಗ್ಗುವ ಸ್ಫರ್ಧೆ ನೋಡುಗರ ಗಮನ ಸೆಳೆಯಿತು.
ಒಂದು ಕ್ವಿಂಟಲ್ ಸಕ್ಕರೆ ಚೀಲನ್ನು ಎತ್ತಿನಬಂಡಿಯಲ್ಲಿಟ್ಟು, ಹೆಗಲ ಮೇಲೆ ಬಂಡಿಯ ನೋಗವನ್ನು ಹೊತ್ತು ಪಟ್ಟಣದ ಆಂಜನೇಯ ದೇವಸ್ಥಾನದಿಂದ ಎತ್ತರದ ಅಗಸಿ ರಸ್ತೆ ಹತ್ತುವ ಸ್ಪರ್ಧೆಯಲ್ಲಿ 10ಕ್ಕೂ ಹೆಚ್ಚು ಯುವಕರು ಉತ್ಸಾಹದಿಂದ ಭಾಗವಹಿಸಿದರು.
ಸ್ಪರ್ಧೆಯಲ್ಲಿ ಭೀಮು ನಿಕ್ಕಂ (ಪ್ರಥಮ), ಶ್ರೀಶೈಲ ಗುಂಡಿ (ದ್ವಿತೀಯ), ಬಸಪ್ಪ ಗುಂಡಿ (ತೃತೀಯ) ಸ್ಥಾನ ಪಡೆದರು. ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಶಹರ ಗಜಾನನ ಮಂಡಳಿ ಗೌರವಾಧ್ಯಕ್ಷ ಶಿವಾನಂದ ತೋಳನೂರ, ಅಧ್ಯಕ್ಷ ಸುರೇಶ ಹಾರಿವಾಳ, ಬಸು ವಾಗ್ಮೋರೆ, ಮಹಾಂತೇಶ ಮಾಲಗಾರ, ಶ್ರೀಶೈಲ ಹೆಬ್ಬಾಳ, ಸಂತೋಷ ಕೂಡಗಿ, ಸಂಗಮೇಶ ಮೈಲೇಶ್ವರ, ಮಂಜು ಹಾರಿವಾಳ, ಶ್ರೀಶೈಲ ಹೆಬ್ಬಾಳ, ಬಾಬು ನಿಕ್ಕಂ ಇದ್ದರು.