ಸೋಮವಾರ, ಜನವರಿ 25, 2021
16 °C

ಚಡಚಣ: ನದಿಗೆ ಉರುಳಿದ ಕಬ್ಬು ಸಾಗಣೆ ಟ್ರಾಕ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಡಚಣ: ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಭೀಮಾ ನದಿಗೆ ಉರುಳಿದ ಘಟನೆ ತಾಲ್ಲೂಕಿನ ಉಮರಾಣಿ ಬಳಿಯ ಉಮರಾಣಿ - ಲವಗಿ ಬಾಂದಾರ ಕಮ್‌ ಬ್ರಿಜ್‌ ಮೇಲೆ ಸೋಮವಾರ ನಡೆದಿದೆ.

ನೆರೆಯ ಮಹಾರಾಷ್ಟ್ರದ ಸಾದೇಪುರ ಗ್ರಾಮದ ಅಗಸರ ಎಂಬುವವರಿಗೆ ಸೇರಿದ ಕಬ್ಬನ್ನು ಹಾವಿನಾಳದ ಇಂಡಿಯನ್ ಶುಗರ್ಸ್ ಕಾರ್ಖಾನೆಗೆ ಸಾಗಾಟ ಮಾಡಲಾಗುತ್ತಿತ್ತು. ಟ್ರಾಕ್ಟರ್ ಭೀಮಾನದಿಯ ಉಮರಾಣಿ ಲವಗಿ ಬ್ಯಾರೇಜ್ ಮೇಲೆ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಚಾಲಕ ಈಜಿ ದಡ ಸೇರಿದ್ದಾನೆ‌. ಕಬ್ಬು ಹಾಗೂ ಟ್ರಾಕ್ಟರ್ ಇಂಜಿನ್, ಟ್ರೈಲರ್‌ ಗಳು ನದಿಯಲ್ಲಿ ಮುಳುಗಿವೆ.

ಘಟನೆಯಿಂದ ಬ್ಯಾರೇಜ್ ಮೇಲೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಬ್ಯಾರೇಜ್ ಮೇಲೆ ಅಧಿಕ ಭಾರದ ಸಾಗಾಟ, ಬೃಹತ್ ವಾಹನಗಳ ಸಂಚಾರ‌ ನಿಷೇಧವಿದ್ದರೂ ಸಂಚಾರ ಮಾಡೋದು ಎಗ್ಗಿಲ್ಲದೇ ನಡೆದಿದೆ. ಈಚೆಗೆ ಪ್ರವಾಹ ಸಂದರ್ಭದಲ್ಲಿ ಬಾಂದಾರದ ತಡೆಗೋಡೆಗಳು ಕಿತ್ತು ಹೋಗಿದ್ದವು. ರೈತರೇ ಇದನ್ನು ದುರಸ್ತಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು