ಇಂಡಿ: ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಡಿ.10 ರಂದು ನಡೆಯುತ್ತಿರುವ ಸುವರ್ಣಸೌಧ ಮುತ್ತಿಗೆ ರ್ಯಾಲಿಯನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದ ಸಚಿವರು, ಶಾಸಕರ ಮುಖಾಂತರ ಒತ್ತಡ ಹೇರಿ, ಪ್ರತಿಭಟನೆ ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ’ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಹೆಚ್. ಬಿರಾದಾರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರು ಹೋರಾಟದ ನೇತೃತ್ವ ವಹಿಸಿದ್ದರು. ಈಗ ಅಧಿಕಾರ ಸಿಕ್ಕ ಮೇಲೆ ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಸಮಾಜಕ್ಕೆ ಶ್ರೀಗಳೇ ಹೈಕಮಾಂಡ್ ಆಗಿದ್ದು ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ವಿಜಯಾನಂದ ಕಾಶಪ್ಪನವರ್, ಲಕ್ಷ್ಮಿ ಹೆಬ್ಬಾಳಕರ್ ಸೇರಿದಂತೆ ಇನ್ನಿತರ ಶಾಸಕರು ಸಚಿವರು ಕೂಡಲೇ ಶ್ರೀಗಳಿಗೆ ಕ್ಷಮೆ ಯಾಚಿಸಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು’ ಎಂದು ಹೇಳಿದರು.

‘ನಮ್ಮ ಹೋರಾಟದಿಂದಲೇ ನೀವು ಶಾಸಕರು, ಮಂತ್ರಿ ಆಗಿದ್ದೀರಿ ಎಂಬುದನ್ನು ಮರೆಯಬಾರದು. ರಾಜಕೀಯ ಪ್ರತಿಷ್ಠೆ ಬದಿಗಿಟ್ಟು ಬಡ ಪಂಚಮಸಾಲಿ ಸಮಾಜದ ಋಣ ತೀರಿಸಲು ಎಲ್ಲರೂ ಒಂದಾಗಬೇಕು’ ಎಂದು ಸಲಹೆ ನೀಡಿದರು.

‘ಸಮಾಜದ ಬಡ ಮಕ್ಕಳ ಶೈಕ್ಷಣಿಕ ಏಳ್ಗೆ ಸೇರಿದಂತೆ ಬಡವರನ್ನು ಮೇಲೆಬ್ಬಿಸುವ ಸದುದ್ದೇಶದಿಂದ ಶ್ರೀಗಳು ಹೋರಾಟ ನಡೆಸುತ್ತಿದ್ದು ಅವರ ಬೆನ್ನಿಗೆ ಇಡೀ ಪಂಚಮಸಾಲಿ ಜನಾಂಗ ನಿಂತಿದೆ. ರಾಜಕಾರಣಿಗಳು ಶ್ರೀಗಳ ಮನಸ್ಸು ನೋಯಿಸಿದರೆ ಸಮಾಜ ಮುಂಬರುವ ದಿನಗಳಲ್ಲಿ ನಿಮಗೆ ತಕ್ಕ ಶಾಸ್ತಿ ಮಾಡಲಿದೆ’ ಎಂದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಬಿ. ಬಿರಾದಾರ ಮಾತನಾಡಿ, ‘ವಕೀಲರ ನೇತೃತ್ವದಲ್ಲಿ ನಡೆಯುತ್ತಿರುವ ಸುವರ್ಣಸೌಧ ಮುತ್ತಿಗೆಗೆ, ಇಂಡಿ ತಾಲ್ಲೂಕಿನ ವಕೀಲರು ಸೇರಿದಂತೆ ಜಿಲ್ಲೆಯ ವಕೀಲರು ಭಾಗವಹಿಸಲಿದ್ದು ಇಂಡಿ ತಾಲ್ಲೂಕಿನಿಂದ ಸುಮಾರು 200ಕ್ಕೂ ಅಧಿಕ ಟ್ರ್ಯಾಕ್ಟರ್ ಸಮೇತ ಹೋರಾಟದಲ್ಲಿ ಭಾಗವಹಿಸಲಾಗುವುದು’ ಎಂದರು.

ಸುವರ್ಣಸೌಧ ಮುತ್ತಿಗೆ ಸಂದರ್ಭದಲ್ಲಿ ಏನಾದರೂ ಅಡೆ-ತಡೆಗಳಾದರೆ ಅದಕ್ಕೆ ಮುಖ್ಯಮಂತ್ರಿ ಹಾಗೂ ಸರ್ಕಾರವೇ ನೇರ ಹೊಣೆ ಆಗಲಿದೆ. ಸರ್ಕಾರ ಡಿ. 9ರ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ ನಮ್ಮ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಬೇಕೆಂದು ವಿನಂತಿಸಿದರು.

ಸಮಾಜದ ಪ್ರಧಾನ ಕಾರ್ಯದರ್ಶಿ ಶಿವಾನಂದ ಚಾಳಿಕಾರ, ವಕೀಲರಾದ ಎಸ್.ಆರ್.ಬಿರಾದಾರ, ಡಿ.ಜಿ. ಜ್ಯೋತಗೊಂಡ, ವೀರೇಂದ್ರ ಪಾಟೀಲ, ಜಿ.ಎಸ್. ಪಾಟೀಲ, ಸಮಾಜದ ಮುಖಂಡರಾದ ಸೋಮು ದೇವರ, ಅನಿಲಗೌಡ ಬಿರಾದಾರ, ಬಾಳು ಮುಳಜಿ, ಶ್ರೀಶೈಲಗೌಡ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.