ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ವರ್ಣಾಕ್ಷರ ಬಾರದ ಇಬ್ಬರು ಶಿಕ್ಷಕರ ಅಮಾನತು

Last Updated 27 ನವೆಂಬರ್ 2021, 19:21 IST
ಅಕ್ಷರ ಗಾತ್ರ

ಸಿಂದಗಿ: ಇಂಗ್ಲಿಷ್‌ ವರ್ಣಾಕ್ಷರ ಬರೆಯಲು ಬಾರದ ಕಾರಣತಾಲ್ಲೂಕಿನ ಗುಂದಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಸಹ- ಶಿಕ್ಷಕರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ.

ಸಹ-ಶಿಕ್ಷಕ ದೌಲತ್ ದೇವಕುಳೆ ಮತ್ತು ಸಹ– ಶಿಕ್ಷಕಿ ಎಂ.ಎನ್.ರಾಂಪೂರಮಠ ಅಮಾನತುಗೊಂಡವರು. ಇಂಗ್ಲಿಷ್‌ ವರ್ಣಾಕ್ಷರಗಳನ್ನು ತಪ್ಪಾಗಿ ಬರೆದು, ಅದನ್ನೇ ಸರಿ ಎಂದುಮಕ್ಕಳಿಗೆ ಹೇಳುತ್ತಿದ್ದರು. ಇದನ್ನು ಪ್ರಶ್ನಿಸಿದ ಪಾಲಕರು, ಗ್ರಾಮಸ್ಥರ ಜೊತೆ ವಾಗ್ವಾದ ಮಾಡಿದ್ದರು. ಈ ಕುರಿತ ವಿಡಿಯೊ ವೈರಲ್‌ ಆಗಿತ್ತು.

ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಕಾರಣಕರ್ತರಾಗಿದ್ದಾರೆ. ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ನೀರಲಗಿ ಅವರು ವರದಿ ಸಲ್ಲಿಸಿದ್ದರು. ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT