ಸಿಂದಗಿ: ಪಟ್ಟಣದ ನೀಲಗಂಗಾ ಚೌಕ್‌ದಲ್ಲಿನ ಅನಿಕೇತನ ಪೂರ್ವ ಪ್ರಾಥಮಿಕ ಶಾಲೆಯ ನರ್ಸರಿ ವಿಭಾಗದಲ್ಲಿ ಓದುತ್ತಿರುವ 2 ವರ್ಷ 10 ತಿಂಗಳ ವಯಸ್ಸಿನ ಬಾಲಕಿ ವರಣ್ಯಾ ಗುರುರಾಜ್ ಕುಲಕರ್ಣಿ ಕೇವಲ 53 ಸೆಕೆಂಡ್ ಸಮಯದಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ರಾಜ್ಯಗಳ ರಾಜಧಾನಿ ಹೆಸರುಗಳನ್ನು ಫಟಾ ಫಟ್ ಆಗಿ ಹೇಳುವ ಮೂಲಕ ನೊಬೆಲ್ ವರ್ಲ್ಡ್ ರಿಕಾರ್ಡ್ ಬುಕ್‌ಗೆ ಸೇರ್ಪಡೆಯಾಗಿದ್ದಾಳೆ.