ಆಲಮಟ್ಟಿ: ಬೇಸಿಗೆಯ ಬಿಲಸಿನ ಪ್ರಖರತೆ ಹೆಚ್ಚುತ್ತಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ಜಿಲ್ಲೆಯ 124 ಕೆರೆಗಳ ಭರ್ತಿಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಕಾಲುವೆಯಿಂದ ನೀರು ಹರಿಸುವ ಪ್ರಕ್ರಿಯೆ ಏ.10 ರಿಂದ ಆರಂಭಗೊಂಡಿದೆ.

ಏಪ್ರಿಲ್ 7 ರಿಂದ ನೀರಾವರಿಗಾಗಿ ಕಾಲುವೆಗೆ ನೀರು ಹರಿಸುವ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಈಗ ಕೇವಲ ಕೆರೆಗಳ ಭರ್ತಿಗಾಗಿ ಮಾತ್ರ ನೀರು ಬಿಡಲಾಗುತ್ತಿದೆ.

ಮುಳವಾಡ ಏತ ನೀರಾವರಿ ಯೋಜನೆ ಹಂತ-2 ಮತ್ತು ಹಂತ-3 ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕಾಲುವೆಗಳ ಜಾಲದಲ್ಲಿ ಬರುವ ಜಿಲ್ಲೆಯ 124 ಕೆರೆಗಳ ಭರ್ತಿಗೆ ನೀರು ಬಿಡಲಾಗುತ್ತಿದೆ. ಹಂತ ಹಂತವಾಗಿ ಕೆರೆಗಳ ಭರ್ತಿಗೆ ಅನುಗುಣವಾಗಿ ನೀರು ಬಿಡಲಾಗುತ್ತಿದ್ದು, ಏಪ್ರಿಲ್ 30 ರವರೆಗೂ ಕಾಲುವೆಗೆ ನೀರು ಹರಿಯಲಿದೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ತಿಳಿಸಿದರು.

2.3 ಟಿಎಂಸಿ ಅಡಿ ನೀರು: ಬೇಸಿಗೆಯಲ್ಲಿ ಕೆರೆಗಳ ಭರ್ತಿಗಾಗಿಯೇ 4.231 ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹಿಸಲಾಗಿತ್ತು. ಆ ಪೈಕಿ ಈಗ 2.34 ಟಿಎಂಸಿ ಅಡಿ ನೀರು ಬಳಸಿ ಕೆರೆಗಳ ಭರ್ತಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಅವರು ಆದೇಶಿಸಿದ್ದಾರೆ. ಆ ಪ್ರಕಾರ ನೀರು ಹರಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.

ಕೆರೆಗಳ ಭರ್ತಿಗಾಗಿಯೇ ಜಲಾಶಯದಲ್ಲಿ ಸಂಗ್ರಹಿಸಿರುವ ನೀರನಲ್ಲಿ ಬಾಕಿ ಉಳಿದ ನೀರನ್ನು ಮುಂದಿನ ಹಂತದಲ್ಲಿ ಅನುಮತಿಯ ಮೇರೆಗೆ ಕೆರೆಗಳಿಗೆ ಹರಿಸಲಾಗುತ್ತದೆ ಎಂದರು.

ಇದರಿಂದ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಲಿದ್ದು, ಅದರಿಂದ ಅಂತರ್ಜಲ ಮಟ್ಟವೂ ಹೆಚ್ಚಿ, ಜನ, ಜಾನುವಾರುಗಳಿಗೆ, ಕೆರೆಗಳ ಕುಡಿಯುವ ನೀರಿನ ಜಾಕವೆಲ್ ಗಳಿಗೆ ಅನುಕೂಲವಾಗಲಿದೆ.

ನೀರಿನ ಸಂಗ್ರಹ: ಏ.13 ಕ್ಕೆ ಆಲಮಟ್ಟಿ ಜಲಾಶಯದ ಮಟ್ಟ 510.84 ಮೀ.ವರೆಗೆ ಇದ್ದು, ಜಲಾಶಯದಲ್ಲಿ 34.19 ಟಿಎಂಸಿ ಅಡಿ ನೀರಿದ್ದು, ಅದರಲ್ಲಿ ಬಳಕೆಯೋಗ್ಯ 16.577 ಟಿಎಂಸಿ ಅಡಿ ನೀರಿದೆ. ಇನ್ನೂ ನಾರಾಯಣಪುರ ಜಲಾಶಯದಲ್ಲಿ ಬಳಕೆಯೋಗ್ಯ 5.3 ಟಿಎಂಸಿ ಅಡಿ ನೀರು ಸಂಗ್ರಹವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-26-305014696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.