ವಿಜಯಪುರ: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ(ಎಎಪಿ)ಯು ಎಲ್ಲ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೋಗೇಶ ಸೋಲಾಪುರ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 44 ಜಿಲ್ಲಾ ಮತ್ತು 158 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಇದ್ದು, ಸರ್ಕಾರ ಕ್ಷೇತ್ರ ಮರುವಿಂಗಡನೆ ಮಾಡುವ ಸಾಧ್ಯತೆಯೂ ಇದೆ. ಈ ವೇಳೆ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚು ಅಥವಾ ಕಡಿಮೆ ಸಹ ಆಗಬಹುದು. ಎಲ್ಲ ಕಡೆಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.

ಈ ಎರಡು ಸ್ಥಳೀಯ ಸಂಸ್ಥೆಗಳಿಗೆ 2016ರಲ್ಲಿ ಕೊನೆಯ ಬಾರಿಗೆ ಚುನಾವಣೆ ನಡೆದಿತ್ತು. ನಂತರ 2021ರಲ್ಲಿ ಚುನಾವಣೆ ಮಾಡಬೇಕಿತ್ತು. ಅಂದಿನ ಬಿಜೆಪಿ ಸರ್ಕಾರ ವಿವಿಧ ಕಾರಣಗಳಿಂದ ಚುನಾವಣೆ ಮುಂದೂಡಿತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸಹ ತ್ವರಿತವಾಗಿ ಚುನಾವಣೆ ನಡೆಸಲು ಮನಸ್ಸು ಮಾಡಲಿಲ್ಲ. ಆದರೆ, ನ್ಯಾಯಾಲಯದ ಸೂಚನೆ ಹಾಗೂ ತರಾಟೆಗೆ ತೆಗೆದುಕೊಂಡ ಕಾರಣ ಜೂನ್ನಲ್ಲಿ ಚುನಾವಣೆ ನಡೆಸುವುದಾಗಿ ಸರ್ಕಾರ ಹೇಳಿದೆ ಎಂದರು.

ಹೀಗಾಗಿ ಚುನಾವಣೆಗಳು ಯಾವುದೇ ಸಂದರ್ಭದಲ್ಲಿ ನಡೆದರೂ, ಈಗಲೇ ಆಮ್ ಆದ್ಮಿ ಪಕ್ಷ ಸಿದ್ಧತೆ ಆರಂಭಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣಕ್ಕೆ ಅಭಿವೃದ್ಧಿ ನಿಂತು ಹೋಗಿದೆ. ಪ್ರಥಮವಾಗಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ಕೊಡಲಾಗುತ್ತದೆ. ಜತೆಗೆ 15 ಜನ ಜಿ.ಪಂ. ಅಭ್ಯರ್ಥಿಗಳು ಹಾಗೂ 25 ರಿಂದ 30 ಜನ ತಾ.ಪಂ. ಅಭ್ಯರ್ಥಿಗಳನ್ನೂ ಗುರುತಿಸಲಾಗಿದೆ ಎಂದರು.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷವು ಈಗಾಗಲೇ ದೆಹಲಿ, ಪಂಜಾಬ್ನಲ್ಲಿ ಮಾದರಿಯಾದ ಆಡಳಿತ ನೀಡಿದೆ. ರಾಜ್ಯ, ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಜನರು ಅವಕಾಶ ಕೊಟ್ಟು ನೋಡಬೇಕು. ಜನಸಾಮಾನ್ಯರ ಪರ ಕಾಳಜಿ ಹೊಂದಿರುವರು ಸಹ ಪಕ್ಷವನ್ನು ಸಂಪರ್ಕಿಸಬಹುದು. ನಿಷ್ಠಾವಂತ, ಪ್ರಾಮಾಣಿಕರಿಗೆ ಪಕ್ಷದಿಂದ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಾಬು ಬಿಜಾಪುರ, ಮೀರಾಸಾಬ ತೊದಲಬಾಗಿ, ಚಿದಾನಂದ ಅವಟಿ, ಕಾಮಣ್ಣ ಗಂಗನಳ್ಳಿ, ರಮೇಶ ದೊಡ್ಡಮನಿ, ಅವಿನಾಶ ಐಹೊಳೆ, ಸಬ್ಬೀರ್ ಪಟೇಲ, ಲಕ್ಷ್ಮಣ ಕಂಬಾಗಿ, ಪ್ರಕಾಶ ಸಬರದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.