ಆಲಗೂರ (ದೇವರಹಿಪ್ಪರಗಿ): ಮೂರು ವರ್ಷಕ್ಕೊಮ್ಮೆ ನಡೆಯುವ ಆಲಗೂರ ಶ್ರೀಹಯ್ಯಾಳ ಲಿಂಗೇಶ್ವರ ಜಾತ್ರಾ ಮಹೋತ್ಸವ ಭಕ್ತಿ, ಭಾವದಿಂದ ಅದ್ದೂರಿಯಾಗಿ ಜರುಗಿತು.

ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಜಾತಿ, ಮತ, ಪಂಥ ಭೇದವಿಲ್ಲದೆ ಸರ್ವಧರ್ವ ಸಮನ್ವಯದ ಸಂಕೇತವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ದೇವರಿಗೆ ಹೂಮಾಲೆ ಅರ್ಪಿಸುವುದರೊಂದಿಗೆ ಚಾಲನೆ ನೀಡಲಾಯಿತು.

ಗ್ರಾಮದ ಹನುಮಾನ್ ದೇವಸ್ಥಾನದಿಂದ ಹಯ್ಯಾಳ ಲಿಂಗೇಶ್ವರ ದೇವಸ್ಥಾನದವರೆಗೆ ಡೊಳ್ಳುಕುಣಿತ, ಈರಗಾರ ಕುಣಿತ ಮತ್ತು ಕಣಿ ಮೇಳದಂತಹ ಜನಪದ ಕಲಾಮೇಳಗಳು ಹಾಗೂ ಪೂರ್ಣಕುಂಭ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ಹೊರಟು, ಗ್ರಾಮದ ದೇಸಾಯಿಯವರ ಬಾವಿಯಲ್ಲಿ ಗಂಗಸ್ಥಳ ಪೂರೈಸಿ ದೇವರಮಾಲೆ, ದೇವರ ಮೂರ್ತಿಗಳು ಪಲ್ಲಕ್ಕಿಯೊಂದಿಗೆ ಹೇಳಿಕೆ ಮಾಡಿ ದೇವಸ್ಥಾನ ಪ್ರವೇಶಿಸಿದವು.

ಸಂಜೆ ಜರುಗಿದ ಧರ್ಮಸಭೆಯಲ್ಲಿ ಮುಚಳಾಂಬ ನಾಗಭೂಷಣ ಶಿವಯೋಗಿಮಠದ ಪ್ರಣಮಾನಂದ ಸ್ವಾಮೀಜಿ ಹಾಗೂ ದೇವಸ್ಥಾನದ ಭೀಮರಾಯ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ನಂತರ, ‘ಹಣೆ ನನ್ನದಿದ್ದರೂ ಹಣೆಬರಹ ನನ್ನದಲ್ಲ’ ಎಂಬ ಸಾಮಾಜಿಕ ನಾಟಕಕ್ಕೆ ವಿಜಯಪುರ ಅನುಗ್ರಹ ಆಸ್ಪತ್ರೆಯ ಪ್ರಭುಗೌಡ ಬಿ.ಎಲ್. ಚಬನೂರ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಹಯ್ಯಾಳದಪ್ಪ ಜನ್ನಪ್ಪಗೋಳ ವಹಿಸಿದ್ದರು.

ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ), ಬಸನಗೌಡ ಪಾಟೀಲ (ಯಡಿಯಾಪೂರ), ಎಚ್.ಡಿ. ನಡುವಿನಕೇರಿ, ಹಳ್ಳೆಪ್ಪಗೌಡ ಚೌದ್ರಿ, ಮಾಂತೇಶ ಮುರಕನಾಳ, ಲಕ್ಕಪ್ಪ ಬಡಿಗೇರ, ಶರಣು ಶಿಂಧೆ, ಮಲ್ಲಿಕಾರ್ಜುನ ಕಾಂಬಳೆ, ಬಿ.ಬಿ. ಕೊಣ್ಣೂರ, ವಿ.ಎನ್. ಮುದ್ರಕಿ, ಪರಶುರಾಮ ಬಡಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-573847857

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.