ವಿಜಯಪುರ: ಆಲಮಟ್ಟಿ ಆಣೆಕಟ್ಟಿನ ಎತ್ತರಕ್ಕೆ ಸಂಬಂಧಿಸಿ ಕೃಷ್ಣಾ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದರೂ ಸಹ ಕೇಂದ್ರ ಸರ್ಕಾರ ಈ ವಿಷಯವಾಗಿ ಅಂತಿಮ ಗೆಜೆಟ್ ಪ್ರಕಟಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.

ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನ್ಯಾಯಾಧಿಕರಣ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜನೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅನೇಕ ರೈತರು ಅಸಮಾಧಾನ ಹೊರಹಾಕಿದರು.

ನ್ಯಾ.ಬ್ರಿಜೇಶ್ಕುಮಾರ ನೇತೃತ್ವದ 2ನೇ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ಲಾಲ್ಬಹದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್ದಿಂದ 524.260 ಮೀಟರ್ಗೆ ಹೆಚ್ಚಿಸಲು ಗೇಟ್ ಅಳವಡಿಸುವಂತೆ ನ್ಯಾಯಾಧಿಕರಣ ತೀರ್ಪು ನೀಡಿದ್ದರೂ ಇಲ್ಲಿಯವರೆಗೂ ಸರ್ಕಾರಗಳು ಗೇಟ್ ಅಳವಡಿಸಲು ಆಗುತ್ತಿಲ್ಲ. ವಿಜಯಪುರ ಜಿಲ್ಲೆ ಹೇಳಿಕೊಳ್ಳಲು ಪಂಚ ನದಿಗಳು ಬೀಡಾಗಿದೆ. ಆದರೆ ವಾಸ್ತವವಾಗಿ ಇನ್ನೂ ಕೆಲವು ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ. ಕೃಷಿಗೆ ನೀರು ಬಿಡುವುದಂತೂ ದೂರದ ಮಾತು ಎಂದು ದೂರಿದರು.

‘ನಮ್ಮ ನೀರಿನ ಪಾಲನ್ನು ನಮಗೆ ಕೊಡಲು ಸರ್ಕಾರಕ್ಕೆ ಒತ್ತಾಯಿಸಲು ಹಾಗೂ ನೀರಿನ ಹಂಚಿಕೆಯಲ್ಲಿ ಅವಳಿ ಜಿಲ್ಲೆಯ ರೈತರಿಗೆ ಯಾವ ರೀತಿ ವಂಚನೆ ಮಾಡಿದ್ದಾರೆ ಎಂಬುದನ್ನು ಚಿಂತನ-ಮಂಥನ ನಡೆಸಲು ಜೂನ್ 8ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲು ನಿರ್ಣಯ ಸ್ವೀಕರಿಸಲಾಯಿತು. ಮೇ 29ರಿಂದ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಿಗೆ ರೈತರ ಬಳಿ ಹೋಗಿ ರೈತರನ್ನು ಜಾಗೃತಿಗೊಳಿಸಿ ವಿಚಾರ ಸಂಕಿರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಲು ಮನವಿ ಮಾಡಿಕೊಳ್ಳಲಾಗುವುದು’ ಎಂದು ಸಂಘಟಕರು ತಿಳಿಸಿದರು.

ಅರವಿಂದ ಕುಲಕರ್ಣಿ, ಮಹಾದೇವಪ್ಪ ತೇಲಿ, ಸಿದ್ಧನಗೌಡ ಪಾಟೀಲ, ಉಮೇಶ ವಾಲೀಕಾರ, ಗುರುರಾಜ ಪಡಶೆಟ್ಟಿ ಹೊನಕೇರಪ್ಪ ತೆಲಗಿ, ಸಿದ್ದಪ್ಪ ಕೋಟ್ಯಾಳ, ಗುರಣಗೌಡ ಬಿರಾದಾರ, ಪ್ರಭುಲಿಂಗ ಕಾರಜೋಳ, ಸಂತೋಷ ಚೌರಿ, ಒಗೆಪ್ಪ ಬಿರಾದಾರ, ಸೋಮಯ್ಯ ನಂದಿಕೋಲ, ಅಮೋಗಿ ಉಕ್ಕಲಿ, ಮಲ್ಲಿಕಾರ್ಜುನ ಬಟಗಿ, ಬೋಗೇಶ ಸೊಲಾಪೂರ, ನೀಲಮ್ಮ ಕಟ್ಟಿಮನಿ, ಲಂಕೆಪ್ಪ ತಳವಾರ, ನಬಿರಸೂಲ ಬಿರಾದಾರ, ಗುರಪ್ಪ ತಳವಾರ, ಅಜೀಜ ಪಾಟೀಲ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-26-1919108359

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.