ವಿಜಯಪುರ: ‘ಸಂಘ ಪರಿವಾರ ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಒಪ್ಪಿಕೊಂಡಂತೆ ನಾಟಕವಾಡಿ, ಅವುಗಳಿಗೆ ‘ಸಂಘ ದೀಕ್ಷೆ’ ಕೊಡುವ ಮೂಲಕ ಅವರ ಚಿಂತನೆಗಳನ್ನು ಕೊಲ್ಲುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ’ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.

ನಗರದ ದರ್ಬಾರ್ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಮಂಗಳವಾರ ಅವರು ಮಾತನಾಡಿದರು.

‘ಡಾ.ಅಂಬೇಡ್ಕರ್ ಇಂದು ಎಲ್ಲರಿಗೂ ಒಂದು ರೀತಿ ಫ್ಯಾಷನ್ ಆಗತೊಡಗಿದ್ದಾರೆ. ಎಲ್ಲರೂ ಅವರನ್ನು ಒಪ್ಪಿಕೊಂಡಂತೆ ನಾಟಕವಾಡುತ್ತಿದ್ದಾರೆ. ನಮ್ಮ ತಲೆಯಲ್ಲಿರುವ ಅಂಬೇಡ್ಕರ್ ಚಿಂತನೆಗಳ ಬದಲಿಗೆ ಸಂಘ ಪರಿವಾರದ ಪಿತಾಮಹಾ ಸಾರ್ವಕರ್ ಚಿಂತನೆಗಳನ್ನು ಬಿತ್ತತೊಡಗಿದ್ದಾರೆ, ಅಂಬೇಡ್ಕರ್ ಅವರನ್ನು ಸೈದ್ಧಾಂತಿಕವಾಗಿ ಬ್ರಾಹ್ಮಣೀಕರಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ’ ಎಂದರು.

‘ಡಾ.ಅಂಬೇಡ್ಕರ್ ಸಂವಿಧಾನ ಬದ್ಧವಾಗಿ ನೀಡಿರುವ ಮತದಾನದ ಹಕ್ಕನ್ನು ದಮನಿಸುವ ನಿಟ್ಟಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಹೆಸರಿನಲ್ಲಿ ಮೋದಿ ಸರ್ಕಾರ ಆಕ್ರಮಣ ಮಾಡಿದೆ, ಲಕ್ಷಾಂತರ ಜನರಿಗೆ ಮತದಾನ ಹಕ್ಕನ್ನೇ ನಿರಾಕರಿಸುವ ದೊಡ್ಡ ಪ್ರಯತ್ನ ಮಾಡುತ್ತಿದೆ’ ಎಂದು ಹೇಳಿದರು.

‘ಎಸ್ಐಆರ್ ವಿಷಯವನ್ನು ಚುನಾವಣೆಯ ನಂತರ ನೋಡಿಕೊಳ್ಳೋಣ ಎಂದು ಹೇಳುವ ಮೂಲಕ ಚುನಾವಣಾ ಆಯೋಗದಂತೆ ಸುಪ್ರೀಂಕೋರ್ಟ್ ಸಹ ಬಿಜೆಪಿ ಜೊತೆ ಕೈ ಜೋಡಿಸಿದೆಯೇ ಎನ್ನುವಂತೆ ತೋರುತ್ತಿದೆ’ ಎಂದರು.

ಪುಸ್ತಕ ಮೇಳದ ಆಯೋಜಕರಾದ ಬಸವರಾಜ ಸೂಳಿಭಾವಿ, ಪತ್ರಕರ್ತ ಅನಿಲ ಹೊಸಮನಿ, ಚಿಂತಕ ಅವಿನಾಶ ಟಿ.ಜಿ.ಎಸ್., ಪಿ.ಟಿ. ಪರಮೇಶ್ವರ ನಾಯಕ, ಧರ್ಮರಾಜ ನಾಯಕ, ಈಶ್ವರ ತೊರವಿ, ಎಸ್.ಎಲ್. ಇಂಗಳೇಶ್ವರ, ಮೋಹನ ಮೇಟಿ, ಪವನ ತೊರವಿ, ತುಕಾರಾಮ ಚಂಚಲಕರ, ಲಕ್ಷ್ಮಣ ಹಂದ್ರಾಳ, ಸಿದ್ದಲಿಂಗ ಬಾಗೇವಾಡಿ, ಸಾಹೇಬಲಾಲ ನಧಾಪ್, ಲಕ್ಷ್ಮಣ ಕಂಬಾಗಿ, ವಿನಾಯಕ ಗುಣಸಾಗರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-26-1374530586

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.