ವಿಜಯಪುರ (ದೇವನಹಳ್ಳಿ): ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವು ಅಕ್ರಮ ಸಾಗಾಣೆ ಹಾಗೂ ಹತ್ಯೆ ತಡೆಗಟ್ಟಲು ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪದಾಧಿಕಾರಿಗಳು ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ವಿಜಯಪುರ ಪಟ್ಟಣದ ವ್ಯಾಪ್ತಿಯ ರಹಮತ್ ನಗರ, ಮೆಹಬೂಬ್ ನಗರ, ಟಿಪ್ಪುನಗರ ವಿವಿಧ ಕಡೆ ಅಕ್ರಮ ಕಸಾಯಿಖಾನೆ, ಗೋಮಾಂಸ ಮಾರಾಟ, ಗೋ ಮಾಂಸದ ಹೋಟೆಲ್ಗಳು ನಡೆಯುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಬಜರಂಗದಳದ ಕೋಲಾರ ವಿಭಾಗ ಸಂಯೋಜಕ ಕೃಷ್ಣಮೂರ್ತಿ ಆರೋಪಿಸಿದರು.

‘ಹಿಂದೂಗಳು ಗೋವುಗಳಿಗೆ ಪೂಜೆ ಸಲ್ಲಿಸುತ್ತಾರೆ. ನಮ್ಮ ಭಾವನೆಗೆ ಧಕ್ಕೆ ತರುವ ಕೆಲಸ ಸಮಜಂಸವಲ್ಲ. ಬ್ರಕೀದ್ ಹಬ್ಬದ ಸಂದರ್ಭದಲ್ಲಿ ಗೋ ಸಾಗಣೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋವು ಹಿಡಿದು ಗೋ ಬಲಿ (ಕುರ್ಬಾನಿ) ನಡೆಯುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಗೋವು ಅಕ್ರಮ ಸಾಗಾಣೆ ಹಾಗೂ ಹತ್ಯೆ ನಿಷೇಧದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಪಟ್ಟಣದಲ್ಲಿ ಅಕ್ರಮ ಕಸಾಯಿಖಾನೆ ಗುರುತಿಸಿ, ದಾಳಿ ನಡೆಸುವ ಮೂಲಕ ಶಾಶ್ವತವಾಗಿ ಮುಚ್ಚಬೇಕು. ಜಾನುವಾರು ಹತ್ಯೆ ನಡೆದ ಮನೆ, ಕಟ್ಟಡ, ಖಾಲಿ ಜಮೀನು ಜಪ್ತಿ ಮಾಡಿ ಮುಟ್ಟುಗೋಲು ಹಾಕಬೇಕು. ಗೋವಧೆ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳನ್ನು ಕರೆದು ಎಚ್ಚರಿಕೆ ನೀಡನೀಡಬೇಕು ಎಂದು ತಿಳಿಸಿದರು.

ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ಆಹಾರ ಸುರಕ್ಷತೆ ಹಾಗೂ ಕಸಾಯಿಖಾನೆ ನಿಯಮಾವಳಿ ಸೇರಿದಂತೆ ವಿವಿಧ ಕಾನೂನು ಕಡ್ಡಾಯವಾಗಿ ಜಾರಿಗೊಳಿಸಬೇಕು. ವಿಶೇಷ ಗಸ್ತು ವ್ಯವಸ್ಥೆ ಹಾಗೂ ಕಡ್ಡಾಯವಾಗಿ ವಾಹನ ತಪಾಸಣೆ ನಡೆಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹ ಗೋರಕ್ಷಾ ಪ್ರಮುಖ್, ಬಜರಂಗದಳ ಮುಖಂಡರಾದ ಮಹೇಶ್, ರಾಹುಲ್, ಕಿರಣ್, ಗಗನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-15-780036205

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.