ಹೊರ್ತಿ: ‘ಬಕ್ರೀದ್ ಹಬ್ಬದ ನೆಪದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. ದನ, ಗೋವುಗಳ ಹತ್ಯೆ ಕಾನೂನು ಬಾಹಿರ. ಪ್ರತಿಯೊಬ್ಬರೂ ಶಾಂತಿ, ಸೌಹಾರ್ದದಿಂದ ಕಾನೂನು ಚೌಕಟ್ಟಿನೊಳಗೆ ಹಬ್ಬ ಆಚರಿಸಬೇಕು’ ಝಳಕಿ ಠಾಣೆ ಪಿಎಸ್ಐ ಮಂಜುನಾಥ ತಿರಕನ್ನವರ ಹೇಳಿದರು.

ಸಮೀಪದ ಝಳಕಿ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಠಾಣಾ ವ್ಯಾಪ್ತಿಯ 27 ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಭಾನುವಾರ ನಡೆದ ಪೂರ್ವಭಾವಿ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮಲ್ಲಿರುವಂತಹ ದುಶ್ಚಟ, ಕೆಟ್ಟ ಚಿಂತೆಗಳನ್ನು ದೇವರಲ್ಲಿ ಒಪ್ಪಿಸಿ ಬಲಿ ಕೊಡುವುದು ಮತ್ತು ದೇವರಲ್ಲಿ ಪ್ರಾರ್ಥಿಸುವುದು ಹಬ್ಬಗಳ ಉದ್ದೇಶವಾಗಿದೆ’ ಎಂದು ತಿಳಿಸಿದರು.

ರವಿಕುಮಾರ್ ಹೂಗಾರ ಮಾತನಾಡಿದರು. ಪೊಲೀಸ್ ಸಿಬ್ಬಂದಿ ಎಂ ಎಫ್.ಬಿರಾದಾರ, ಶಂಭುಲಿಂಗ ಪೂಜಾರಿ, ಭೀಮರಾಯ ದೇವರ, ರಾಜು ಲಾಳಸಂಗಿ, ರೇವಣಸಿದ್ಧ ಗೋಡೆಕಾರ, ಮಹೇಶ ಬೆಳ್ಳೆನ್ನವರ, ಹಜರತ ಮುಲ್ಲಾ, ಇಸ್ಮಾಯಿಲ್ ದರ್ಶನಾಳ, ಶೌಕತ್ಅಲಿ ಜಹಗೀರದಾರ, ಜಿಲ್ಹಾನಿ ಮಕಾಂದರ, ರಜಾಕ್ ಭಾಗವಾನ, ಮೀರಾಸಾಬ ಶೇಖ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-26-114053373

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.