ಇಂಡಿ: ಬಕ್ರೀದ್ ಮುಸ್ಲಿಮರ ತ್ಯಾಗ ಮತ್ತು ಬಲಿದಾನದ ಪ್ರಮುಖ ಹಬ್ಬವಾಗಿದೆ. ಅಲ್ಲಾಹನ ಮೇಲಿನ ಭಕ್ತಿಯಿಂದ ಪ್ರವಾದಿ ಮಹಮ್ಮದ ಇಬ್ರಾಹಿಂ ತಮ್ಮ ಮಗನನ್ನೇ ಬಲಿ ಕೊಡಲು ಮುಂದಾದಾಗ ಅವರ ತ್ಯಾಗಕ್ಕೆ ಮೆಚ್ಚಿ ಅಲ್ಲಾಹ ಮಗನ ಬದಲಾಗಿ ಕುರಿಯನ್ನು ಬಲಿ ನೀಡುವಂತೆ ಮಾಡಿದ ಪವಾಡ ನೆನಪಿಸುತ್ತದೆ ಈ ಆಚರಣೆ ಎಂದು ಧರ್ಮಗುರು ಮೌಲಾನಾ ಶಾಕೀರ ಹುಸೇನ ಕಾಶ್ಮಿ ಹೇಳಿದರು.

ಅವರು ಗುರುವಾರ ನಗರದ ಹಂಜಗಿ ರಸ್ತೆಯ ಈದಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ನಡೆದ ನಮಾಜ್ ಕಾರ್ಯಕ್ರಮದ ಮೊದಲು ಮಾತನಾಡಿದರು.

ಧರ್ಮಗುರುಗಳಾದ ಮುಫ್ತಿ ಅಬ್ದುಲ್ ರಹಮಾನ್, ಹಾಫೀಜ, ಫಯರೋಜ ಬಾಗವಾನ, ಜಾವೇದ ಮೋಮಿನ, ಅಬ್ದುಲ್ ರಹಮಾನ ಬಾಗವಾನ , ಅಬ್ದುಲ್ ರಶಿದ ಮುಗಳಿ, ಷರೀಪ ಪಟೇಲ, ಹಸನ ಮುಜಾವರ, ಯುನುಶ ರೇವೂರಕರ, ಫಯಾಜ ಬಾಗವಾನ ಭಾಗವಹಿಸಿದ್ದರು.

ನಗರದ ಅಂಜುಮನ್ ಮೈದಾನದಲ್ಲಿ ಪ್ರಾರ್ಥನೆ ಮಾಡಿದರು. ಝಿಯಾ ಉಲ್ ಹಕ್ ಉಮರಿ ನಮಾಜ ಬೋಧಿಸಿದರು. ತಾಲ್ಲೂಕಿನ ತಾಂಬಾ, ಸಾತಲಗಾಂವ, ಇಂಗಳಗಿ, ಸಾಲೋಟಗಿ, ಭತಗುಣಕಿ ಈದಗಾ ಮೈದಾನದಲ್ಲಿ ನಮಾಜ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-26-1487829399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.